ಅಂಪೈರ್ ವಿರುದ್ಧ ಕೊಹ್ಲಿ ಫುಲ್ ಗರಂ- ವಿಡಿಯೋ

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಫುಲ್ ಗರಂ ಆದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆಕ್ಲೆಂಡ್‍ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ ಎಲ್‍ಬಿಡಬ್ಲ್ಯೂ ಔಟ್ ಆಗಿದ್ದರು. ನಿಗದಿತ ಸಮಯದ ನಂತರ ಅವರು ಡಿಆರ್‌ಎಸ್‌ ಮನವಿ ಮಾಡಿದರು. ಆಗ ಅಂಪೈರ್ ಬ್ರೂಸ್ ಆಕ್ಸೆನ್‍ಫೋರ್ಡ್ ಅನುಮೋದಿಸಿದರು. ಇದರಿಂದಾಗಿ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಕೋಪ ವ್ಯಕ್ತಪಡಿಸಿದರು. ನಿಯಮಗಳ ಪ್ರಕಾರ, ಮೊದಲ ಅಂಪೈರ್ ನಿರ್ಧಾರದ ನಂತರದ 15 ಸೆಕೆಂಡುಗಳಲ್ಲಿ ಡಿಆರ್‌ಎಸ್‌ಗೆ ಸಲ್ಲಿಸಬೇಕು. ಆದರೆ 15 ನಿಮಿಷವಾದ ನಂತರ ಮನವಿಯನ್ನು ಒಪ್ಪಿದ್ದಕ್ಕೆ ಕೊಹ್ಲಿ ಸಿಟ್ಟಾದರು. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

https://twitter.com/SMmPMm/status/1225993208678629376

ಯಜುವೇಂದ್ರ ಚಹಲ್ ಎಸೆದ ಇನ್ನಿಂಗ್ಸ್ ನ 17ನೇ ಓವರಿನ 5ನೇ ಎಸೆತದಲ್ಲಿ ಅಂಪೈರ್ ನ್ಯೂಜಿಲೆಂಡ್ ಆರಂಭಿಕ ಆಟಗಾರ ನಿಕೋಲ್ಸ್ ಗೆ ಎಲ್‍ಬಿಡಬ್ಲ್ಯೂ ಔಟ್ ನೀಡಿದರು. ಇದರ ನಂತರ ಡಿಆರ್‌ಎಸ್‌ಗೆ ಸಲ್ಲಿಸಿದಾಗಲೂ ನಿಕೋಲ್ಸ್ ಅವರನ್ನು ಔಟ್ ಎಂದು ತಿಳಿಸಲಾಯಿತು. ಈ ಮಧ್ಯೆ ವಿರಾಟ್ ಕೊಹ್ಲಿ ಅಂಪೈರ್ ಹತ್ತಿರ ಹೋಗಿ ಅಸಮಾಧಾನ ಹೊರ ಹಾಕಿದ್ದರು. ಆದರೆ ಅಂಪೈರ್ ಬ್ರೂಸ್ ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿ ನಿಂತಿದ್ದರು.

ಆರಂಭಿಕ ಬ್ಯಾಟ್ಸ್‌ಮನ್ ನಿಕೋಲ್ಸ್ 59 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಮಾರ್ಟಿನ್ ಗುಪ್ಟಿಲ್ ಅವರೊಂದಿಗೆ ಮೊದಲ ವಿಕೆಟ್‍ಗೆ 93 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು.

https://twitter.com/SMmPMm/status/1225992972279222275

Comments

Leave a Reply

Your email address will not be published. Required fields are marked *