ಬರ್ಮಿಂಗ್‌ಹ್ಯಾಂ: ಅಂತಿಮ ಪಂದ್ಯ ಗೆದ್ದು ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ಆಸೆಗೆ ತಣ್ಣೀರು ಎರಚಿದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.
ಇದೇ ಜುಲೈ 7ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ T20 ಸರಣಿ ಆರಂಭವಾಗಲಿದೆ. ನಂತರ ಜುಲೈ 15ರಿಂದ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 7, 9 ಮತ್ತು 10 ರಂದು ಟಿ20 ಸರಣಿ ನಡೆಯಲಿದ್ದು, ಜುಲೈ 12, 14 ಹಾಗೂ 17ರಂದು ಏಕದಿನ ಸರಣಿ ನಡೆಯಲಿದೆ. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

ಬರ್ಮಿಂಗ್‌ಹ್ಯಾಮ್‌ನ ಎಡ್ಜಾಬಸ್ಟನ್ ಸ್ಟೇಡಿಯಂನಲ್ಲಿ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?
ಟಿ20 ಸರಣಿ – ಯಾವಾಗ ಎಲ್ಲಿ?
- 1ನೇ ಪಂದ್ಯ – ಜುಲೈ 07- ಸೌಥಂಪ್ಟನ್‌ನ ದಿ ರೋಸ್‌ಬೌಲ್ ಸ್ಟೇಡಿಯಂ
- 2ನೇ ಪಂದ್ಯ – ಜುಲೈ 09- ಬರ್ಮಿಂಗ್‌ಹ್ಯಾಂನ ಎಡ್ಜಾಬಸ್ಟನ್ ಸ್ಟೇಡಿಯಂ
- 3ನೇ ಪಂದ್ಯ – ಜುಲೈ 10- ನಾಟಿಂಗ್‌ಹ್ಯಾಂನ ಟ್ರೆಂಟ್‌ಬ್ರಿಡ್ಜ್ ಸ್ಟೇಡಿಯಂ

ಏಕದಿನ ಸರಣಿ – ಯಾವಾಗ ಎಲ್ಲಿ?
- ಮೊದಲ ಏಕದಿನ – ಜುಲೈ 12- ಲಂಡನ್‌ನ ದಿ ಓವಲ್ ಸ್ಟೇಡಿಯಂ
- 2ನೇ ಏಕದಿನ – ಜುಲೈ 14- ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂ
- 3ನೇ ಏಕದಿನ – ಜುಲೈ 17- ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಒಲ್ಡ್ ಟ್ರಾನ್ಸ್‌ಫರ್ಡ್ ಸ್ಟೇಡಿಯಂ

Leave a Reply