ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತು ಎಸ್ಸೆಕ್ಸ್ ತಂಡ ಮಾಡಿರುವ ಟ್ವೀಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಟ್ವೀಟ್ ಕಂಡ ಅಭಿಮಾನಿಗಳು ಖಡಕ್ ಉತ್ತರ ನೀಡಿ ತಿರುಗೇಟು ನೀಡಿದ್ದಾರೆ.
ಅಂದಹಾಗೇ ಎಸ್ಸೆಕ್ಸ್ ತಂಡದ ವಿರುದ್ಧ ಟೀಂ ಇಂಡಿಯಾ ಆಡಿದ ಏಕೈಕ ಅಭ್ಯಾಸ ಪಂದ್ಯದಲ್ಲಿ ನಾಯಕ ಕೊಹ್ಲಿ ಅರ್ಧಶತಕ ಗಳಿಸಿದ್ದರು. ಈ ವಿಡಿಯೋವನ್ನು ಟ್ವೀಟ್ ಮಾಡಿದ ಎಸ್ಸೆಕ್ಸ್ ತಂಡ, ಈ ಆಟಗಾರ ಕ್ರಿಕೆಟ್‍ಗೆ ಕೆಟ್ಟವನಲ್ಲ ಎಂದು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿತ್ತು. ಸದ್ಯ ಈ ಟ್ವೀಟ್ ಟೀಂ ಇಂಡಿಯಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ಹಲವರು ಮರುಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
This guy’s not bad at cricket…
50 up for @imVkohli off 67 balls! 👌#ESSvIND pic.twitter.com/CS6ObCNweT— Essex Cricket (@EssexCricket) July 25, 2018
ಇಡೀ ವಿಶ್ವಕ್ಕೆ ಕೊಹ್ಲಿ ರನ್ ಮಷೀನ್ ಎಂಬುದು ಗೊತ್ತು. ಆದರೆ ಇದು ಸದ್ಯ ನಿಮ್ಮ ಅರಿವಿಗೆ ಬಂದಿದೆ ಎಂದು ವ್ಯಂಗ್ಯವಾಡಿ ಯಾನ್ ಎಂಬವರು ಮರುಟ್ವೀಟ್ ಮಾಡಿದ್ದಾರೆ.
https://twitter.com/Vishakha68899/status/1022114014866931713?
ಕೊಹ್ಲಿ ನಿಮ್ಮ ಬಾಯಿ ಮುಚ್ಚಿಸಲು ಈ ಸರಣಿಯಲ್ಲಿ ಕಡಿಮೆ ಎಂದರೂ 3 ಶತಕಗಳನ್ನು ಸಿಡಿಸಲಿದ್ದಾರೆ ಎಂದು ಗೌರವ್ ಕಾಲ್ರಾ ಹೇಳಿದ್ದಾರೆ.
He have world cup in his hand.. what about you guys?? 😂😂😂 Or I can say you guys are not bad at lose in world cup matches!! #kiddos
— Pranaw Botke (@Pranaw125) July 28, 2018
ನಮ್ಮ ಕೈಯಲ್ಲಿ ವಿಶ್ವಕಪ್ ಇದೆ. ನಿಮ್ಮ ಕತೆ ಏನು? ಅಥವಾ ವಿಶ್ವಕಪ್ ಪಂದ್ಯಗಳಲ್ಲಿ ನೀವು ಸೋಲುವುದು ಖಚಿತ ಎಂದು ಪ್ರಾಣಾವ್ ತಮ್ಮ ಟ್ವೀಟ್‍ನಲ್ಲೇ ಕಿಡಿಕಾರಿದ್ದಾರೆ.
you're being internet explorer of cricket. What u said was being said in 2009. Now, @imVkohli is legend.
— Manish Gadre (@GadManCrazy) July 26, 2018
ಎಸ್ಸೆಕ್ಸ್ ವಿರುದ್ಧ ಟೆಸ್ಟ್ ಅಭ್ಯಾಸ ಪಂದ್ಯ ಡ್ರಾ ಆಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ಉತ್ತಮ ಆರಂಭ ನೀಡಲು ಎಡವಿದ್ದು, ತಂಡದ ಚಿಂತೆಗೆ ಕಾರಣವಾಗಿದೆ. ಆರಂಭಿಕ ಆಟಗಾರ ಧವನ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ನಡುವೆ ಕನ್ನಡಿಗ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 58 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಅಜೇಯ 36 ರನ್ ಗಳಿಸಿ ಭರವಸೆ ಮೂಡಿಸಿದ್ದಾರೆ.
KL Rahul and Shikhar Dhawan to begin the proceedings for #TeamIndia in the 2nd innings of the warm-up game.#ESSvIND
— BCCI (@BCCI) July 27, 2018

Leave a Reply