ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿದ್ದ ಟೀ ಇಂಡಿಯಾ ಗುರುವಾರದಿಂದ ಆರಂಭವಾಲಿರುವ ಬಾಂಗ್ಲಾ ವಿರುದ್ಧದ ಸರಣಿಗೆ ಸಿದ್ಧತೆ ಆರಂಭಿಸಿದೆ.
ಟೀಂ ಇಂಡಿಯಾದ ಉತ್ತಮ ಫಾರ್ಮ್ ನಲ್ಲಿರುವ ಉಮೇಶ್ ಯಾದವ್, ಶಮಿ, ಇಶಾಂತ್ ಶರ್ಮಾ ಹಾಗೂ ಆರ್.ಅಶ್ವಿನ್, ಜಡೇಜಾರನ್ನು ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಬಾಂಗ್ಲಾ ಎದುರಿಸಬೇಕಾಗಿದೆ. 2000ರಲ್ಲಿ ಟೀಂ ಇಂಡಿಯಾ ವಿರುದ್ಧ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆರಂಭಿಸಿದ ಬಾಂಗ್ಲಾ ಇದುವರೆಗೂ ಭಾರತ ವಿರುದ್ಧ ಟೆಸ್ಟ್ ಗೆಲುವು ಪಡೆದಿಲ್ಲ. 19 ವರ್ಷಗಳಿಂದ 9 ಬಾರಿ ಭಾರತ ತಂಡವನ್ನು ಎದುರಿಸಿರುವ ಬಾಂಗ್ಲಾ ಪಡೆ 7 ಬಾರಿ ಸೋಲುಂಡು, 2 ಟೆಸ್ಟ್ ಪಂದ್ಯಗಳು ಡ್ರಾ ಆಗಿದೆ.
Snaps of Bangladesh team today's practice session at Holkar Cricket Stadium, Indore ahead of the First Test. pic.twitter.com/miTD4hszrn
— Bangladesh Cricket (@BCBtigers) November 12, 2019
2000 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರೂ ಭಾರತದಲ್ಲಿ ಟೆಸ್ಟ್ ಪಂದ್ಯವಾಡಲು ಬಾಂಗ್ಲಾ 17 ವರ್ಷ ಕಾಯಬೇಕಾಯಿತು. 2017ರಲ್ಲಿ ಹೈದರಾಬಾದ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದ ಬಾಂಗ್ಲಾ 208 ರನ್ ಗಳಿಂದ ಸೋಲುಂಡಿತ್ತು. ಈ ಬಾರಿ ಬಾಂಗ್ಲಾದೇಶ ಭಾರದಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದೇ ವೇಳೆ ಕ್ರಿಕೆಟ್‍ನಿಂದ ನಿಷೇಧಕ್ಕೆ ಒಳಗಾಗಿ ಪ್ರಮುಖ ಆಟಗಾರ ಶಕೀಬ್ ಅಲ್ ಹಸನ್, ಗಾಯದ ಕಾರಣದಿಂದ ಮುಶ್ರಫೆ ಮೊರ್ತಾಜ ಹಾಗೂ ವೈಯಕ್ತಿಕ ಕಾರಣದಿಂದ ಶಮೀಮ್ ಟೆಸ್ಟ್ ಗೆ ಅಲಭ್ಯರಾಗಿದ್ದು, ಪ್ರಮುಖ ಆಟಗಾರರ ಗೈರಿನಲ್ಲಿ ಬಾಂಗ್ಲಾ ತಂಡ ಹೇಗೆ ಬಲಿಷ್ಠ ಟೀಂ ಇಂಡಿಯಾ ತಂಡವನ್ನು ಎದುರಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಕಳೆದ 19 ವರ್ಷಗಳಲ್ಲಿ 115 ಟೆಸ್ಟ್ ಪಂದ್ಯಗಳನ್ನು ಆಡಿರುವ ಬಾಂಗ್ಲಾ ದೇಶ ಕ್ರಿಕೆಟ್ ತಂಡ 13 ಪಂದ್ಯಗಳಲ್ಲಿ ಗೆಲುವು ಪಡೆದರೆ 86 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದ 16 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.
From blues to whites – @ImRo45 back in the groove ahead of the 1st Test #TeamIndia #INDvBAN pic.twitter.com/DYmXcvyZvV
— BCCI (@BCCI) November 13, 2019
ಇತ್ತ ಸತತ ಗೆಲುವಿನೊಂದಿಗೆ ಮುನ್ನಡೆಯುತ್ತಿರುವ ಕೊಹ್ಲಿ ಪಡೆ ವಿದೇಶಿ ಪಿಚ್ ಸೇರಿದಂತೆ ತವರಿನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಭಾರತ ತಂಡದ ನಾಯಕತ್ವ ವಹಿಸಿದ್ದ 27 ಆಟಗಾರರ ಪೈಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಗೆಲುವು ಪಡೆದ ನಾಯಕರ ಸಾಲಿನಲ್ಲಿ 61ರ ಸರಾಸರಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. 2014-15ರಲ್ಲಿ ಆಸೀಸ್ ವಿರುದ್ಧ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕೊಹ್ಲಿ, ಇದುವರೆಗೂ 14 ಟೆಸ್ಟ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ 40 ಟೆಸ್ಟ್ ಪಂದ್ಯಗಳಿಗೆ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
From blues to whites – @ImRo45 back in the groove ahead of the 1st Test #TeamIndia #INDvBAN pic.twitter.com/DYmXcvyZvV
— BCCI (@BCCI) November 13, 2019
https://twitter.com/BCCI/status/1194237138981642242

Leave a Reply