ರನ್‌ ಓಡಲು ಪಂತ್‌ ನಿರಾಕರಣೆ – ಗುರಾಯಿಸಿದ ಕೊಹ್ಲಿ

ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ ಎರಡನೇ ಟೆಸ್ಟ್‌ನ (2nd Test) ಎರಡನೇ ದಿನದಾಟದಲ್ಲಿ ರನ್ ಓಡಲು ನಿರಾಕರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್‍ರನ್ನು (Rishabh Pant) ಕಂಡು ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಗುರಾಯಿಸಿದ ಪ್ರಸಂಗ ನಡೆದಿದೆ.

ಊಟಕ್ಕೂ ಮೊದಲು ಕೊನೆಯ ಓವರ್‌ ಕೊನೆಯ ಎಸೆತವನ್ನು ಎದುರಿಸಿದ ಕೊಹ್ಲಿ ಮಿಡಾನ್ ನತ್ತ ಬಾರಿಸಿ ರನ್ ಓಡಲು ಮುಂದಾದರು ಆದರೆ ನಾನ್‍ಸ್ಟ್ರೈಕ್‍ನಲ್ಲಿದ್ದ ಪಂತ್ ನಿರಾಕರಿಸಿದರು. ಇದರಿಂದ ಮತ್ತೆ ಸ್ಟ್ರೈಕ್‌ಗೆ ಓಡಿದ ಕೊಹ್ಲಿ ಡೈವ್ ಮಾಡಿ ರನೌಟ್‍ನಿಂದ ಪಾರಾದರು. ಇದರಿಂದ ಸಿಟ್ಟಿಗೆದ್ದ ಕೊಹ್ಲಿ ಪಂತ್‍ರನ್ನು ಗುರಾಯಿಸಿ ನೋಡಿದರು. ಇದನ್ನೂ ಓದಿ: IPL Auction 2023: ಸ್ಯಾಮ್, ಗ್ರೀನ್, ಬೆನ್ ಮೇಲೆ ಫ್ರಾಂಚೈಸ್ ಕಣ್ಣು – ಕನ್ನಡಿಗರಿಗೂ ಹೆಚ್ಚಿದ ಡಿಮ್ಯಾಂಡ್

https://twitter.com/Sudhakar0718/status/1606166477232537600

 ಕೊಹ್ಲಿ ಗುರಾಯಿಸುತ್ತಿದ್ದಂತೆ ಪಂತ್ ಕೂಡ ಕೊಹ್ಲಿಯತ್ತ ನೋಡುತ್ತ ನಿಂತರು. ಬಳಿಕ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಊಟದ ವಿರಾದ ಬಳಿಕ 24 ರನ್ (73 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಆದರು. ಅತ್ತ ಪಂತ್ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 55 ಓವರ್‌ಗಳ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿದ್ದು, 35 ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *