ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಆಟಗಾರರು – ಪಂದ್ಯದ ಸಂಭಾವನೆ ಸೈನಿಕರ ನಿಧಿಗೆ

ರಾಂಚಿ: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಟೂರ್ನಿಯ 3ನೇ ಪಂದ್ಯ ರಾಂಚಿಯಲ್ಲಿ ಆರಂಭವಾಗಿದ್ದು, ಟೀಂ ಇಂಡಿಯಾ ಆಟಗಾರರು ಪಂದ್ಯದಲ್ಲಿ ವಿಶೇಷ ಆರ್ಮಿ ಕ್ಯಾಪ್ ಧರಿಸಿ ಕಣಕ್ಕೆ ಇಳಿದಿದ್ದಾರೆ.

ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ನೀಡಲು ವಿಶೇಷವಾಗಿ ಭಾರತದ ಸೇನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕ್ಯಾಫ್ ಧರಿಸಲಾಗಿದೆ. ಪಂದ್ಯದಲ್ಲಿ ವಿಶೇಷ ಕ್ಯಾಪ್ ಧರಿಸಿ ಆಡುವುದು ಮಾತ್ರವಲ್ಲದೇ ಯೋಧರ ಮಕ್ಕಳ ಶಿಕ್ಷಣ, ಕುಟುಂಬಗಳ ನೆರವಿಗೆ ಧವಿಸುವ ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಕೂಡ ಟೀಂ ಇಂಡಿಯಾ ಮುಂದಾಗಿದೆ.

ಈ ಪಂದ್ಯದ ಸಂಭಾವನೆಯನ್ನು ಟೀಂ ಇಂಡಿಯಾ ಎಲ್ಲಾ ಸಿಬ್ಬಂದಿ, ಆಟಗಾರರು ಕೂಡ ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಲಿದ್ದಾರೆ. ಅಲ್ಲದೇ ದೇಶದ ನಾಗರಿಕರು ಕೂಡ ಸೈನಿಕರಿಗೆ ನೆರವು ನೀಡಿ ಎಂದು ಕೊಹ್ಲಿ ಮನವಿ ಮಾಡಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಎಲ್ಲಾ ಆಟಗಾರರಿಗೆ ಕ್ಯಾಪ್ ನೀಡಿದರು. ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *