ಮುಂಬೈ: ಸತತ ಟಿ-20 ಪಂದ್ಯಗಳ ಬಳಿಕ ಇಂದಿನಿಂದ ಭಾರತ ತಂಡ ಏಕದಿನ ಪಂದ್ಯವನ್ನು ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ಜೊತೆ 3 ಪಂದ್ಯಗಳ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ ಗೆ ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಈ ಸರಣಿ ಭಾರತಕ್ಕೆ ಮಹತ್ವದಾಗಿದೆ. ಭಾರತದ ತಂಡಕ್ಕೆ ಈ ವರ್ಷದ ಮೊದಲ ಏಕದಿಂದ ಪಂದ್ಯ ಇದಾಗಿದ್ದು, ಗೆಲುವಿನ ಹುಮ್ಮಸ್ಸಿನಲ್ಲಿ ಕೊಹ್ಲಿ ಪಡೆ ಇದೆ.
Action starts in a few hours 🇮🇳🇦🇺
Get ready for an exciting contest between two swashbuckling sides 📺📺 #TeamIndia #INDvAUS @Paytm pic.twitter.com/0lSTYD2w2I— BCCI (@BCCI) January 14, 2020
ಭಾರತ ತಂಡಕ್ಕೆ ರೋಹಿತ್ ಶರ್ಮಾ, ಶಿಖರ್ ಧವನ್ ವಾಪಸ್ ಆಗಿದ್ದು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕೆ.ಎಲ್.ರಾಹುಲ್ ಭರ್ಜರಿ ಫಾರ್ಮ್ ನಲ್ಲಿದ್ದು 3ನೇ ಕ್ರಮಾಂಕದಲ್ಲಿ ಆಡೋ ಸಾಧ್ಯತೆ ಇದೆ. ನಾಯಕ ವಿರಾಟ್ ಕೊಹ್ಲಿ 4 ನೇ ಸ್ಥಾನದಲ್ಲಿ ಆಡಲಿದ್ದಾರೆ. ಉಳಿದಂತೆ ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್ ಟೀಂ ಇಂಡಿಯಾದ ಬ್ಯಾಟಿಂಗ್ ಬಲ. ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಆಲ್ ರೌಂಡರ್ ಜಾಗವನ್ನು ತುಂಬಲಿದ್ದಾರೆ. ಶಮಿ, ಬುಮ್ರಾ, ಕುಲ್ದೀಪ್ ಯಾದವ್, ಭಾರತದ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಆಸ್ಟ್ರೇಲಿಯಾ ತಂಡ ಕೂಡಾ ಬಲಿಷ್ಠವಾಗಿದೆ. ಆರೋನ್ ಪಿಂಚ್ ತಂಡ ಮುನ್ನಡೆಸುತ್ತಿದ್ದಾರೆ. ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇರ್ ಬ್ಯಾಟಿಂಗ್ ಬಲ ಇದ್ದರೆ, ಪ್ಯಾಟ್ ಕಮ್ಮಿನ್ಸ್ ಅಲ್ ರೌಂಡರ್ ಜಾಗ ತುಂಬಲಿದ್ದಾರೆ. ಮಿಚೆಲ್ ಸ್ಟಾರ್ಕ್, ಹೇಜಲ್ ವುಡ್, ಆಡಂ ಜಂಪಾ ಬೌಲಿಂಗ್ ಪಡೆಯಲ್ಲಿದ್ದಾರೆ.
These two 🔥💥☄️@Jaspritbumrah93 & @navdeepsaini96 firing on all cylinders #TeamIndia #INDvAUS @Paytm pic.twitter.com/nrvKLnpnSj
— BCCI (@BCCI) January 13, 2020
2018ರ ಏಕದಿನ ಸರಣಿಯಲ್ಲಿ ಭಾರತ 3-2 ರಲ್ಲಿ ಆಸ್ಟ್ರೇಲಿಯಾಗೆ ಶರಣಾಗಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳೊಕೆ ಕೊಹ್ಲಿ ಪಡೆ ಸಿದ್ಧವಾಗಿದೆ. ಇದೂವರೆಗೂ ಭಾರತ-ಆಸ್ಟ್ರೇಲಿಯಾ 137 ಪಂದ್ಯಗಳನ್ನು ಆಡಿದ್ದು, ಭಾರತ 50 ಪಂದ್ಯಗಳಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ 77 ಪಂದ್ಯಗಳಲ್ಲಿ ಜಯಗಳಿಸಿದೆ. 10 ಪಂದ್ಯಗಳು ಡ್ರಾ ಆಗಿವೆ. ಐಸಿಸಿ ರ್ಯಾಂಕಿಂಗ್ ನಲ್ಲಿ ಭಾರತ 2 ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 4 ನೇ ಸ್ಥಾನದಲ್ಲಿದೆ.
ಮಧ್ಯಾಹ್ನ 1.30 ಕ್ಕೆ ಪಂದ್ಯಗಳು ಆರಂಭವಾಗಲಿದೆ. ವಾಂಖೇಡೆ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಸುರಿಮಳೆ ಆಗೋ ಸಾಧ್ಯತೆ ಇದೆ.
https://twitter.com/BCCI/status/1216673393015250944
ಸಂಭಾವ್ಯ ಆಟಗಾರರ ಪಟ್ಟಿ
ಭಾರತ ತಂಡ– ವಿರಾಟ್ ಕೊಹ್ಲಿ(ನಾಯಕ) ರೋಹಿತ್, ಧವನ್, ರಾಹುಲ್, ಜಡೇಜಾ, ಶ್ರೇಯಸ್ ಅಯ್ಯರ್, ಜಾಧವ್, ಕುಲ್ದೀಪ್ ಯಾದವ್, ಶಮಿ, ಬೂಮ್ರಾ, ಶಾರ್ದೂಲ್ ಠಾಕೂರ್.
ಆಸ್ಟ್ರೇಲಿಯಾ ತಂಡ– ಆರೋನ್ ಪಿಂಚ್( ನಾಯಕ), ವಾರ್ನರ್, ಸ್ಟೀವ್ ಸ್ಮಿತ್, ಲಬುಶೇನ್, ಪೀಟರ್ ಹ್ಯಾಂಡ್ಸ್ ಕಂಬ್, ಅಲೆಕ್ಸ್ ಕಾರಿ, ಆಸ್ಟನ್ ಆಗರ್, ಪ್ಯಾಟ್ ಕಮ್ಮಿನ್ಸ್, ಜಂಪಾ,ಹೇಜಲ್ ವುಡ್, ಮಿಚೆಲ್ ಸ್ಟಾರ್ಕ್.
When in Mumbai 😎😎
Hitman is READY 💪🏻🇮🇳 #TeamIndia #INDvAUS @Paytm pic.twitter.com/kB4FrFLifS— BCCI (@BCCI) January 13, 2020

Leave a Reply