`ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ಟ್ರೆನಿನಾಡ್: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲದಿಂದ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ ಭರ್ಜರಿ ಸಾಧಿಸಿದೆ.

ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಭಾರತಕ್ಕೆ 165 ರನ್‌ಗಳ ಗುರಿ ನೀಡಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಭಾರತ 19 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 165 ರನ್‌ಗಳಿಸಿ ಮುನ್ನಡೆ ಸಾಧಿಸಿತು. ರೋಹಿತ್ ಶರ್ಮಾ ಬಳಗ ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ.

https://twitter.com/Abdullah__Neaz/status/1554541514750959616

165 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರು ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ 11 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಸೂರ್ಯಕುಮಾರ್ ಯಾದವ್‌ಗೆ 2ನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಸಾಥ್ ನೀಡಿದರು. ಸೂರ್ಯಕುಮಾರ್ ಮತ್ತು ಶ್ರೇಯಸ್ ಅಯ್ಯರ್ 86 ರನ್ ಜೊತೆಯಾಟ ಆಡಿದರು.

ವಿಂಡೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸೂರ್ಯಕುಮಾರ್ 8 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಡೊಮಿನಿಕ್ ಡ್ರೇಕ್ಸ್ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದರು. ಇದನ್ನೂ ಓದಿ: ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಕ್ಕೆ ಆಸರೆಯಾದ ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ ಅಜೇಯ 33 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೀಪಕ್ ಹೂಡಾ ಅಜೇಯ 10 ಹಾಗೂ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು. ಟೀಂ ಇಂಡಿಯಾ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್ ತಲಾ ಒದೊಂದು ವಿಕೆಟ್ ಪಡೆದರು.

ಮೇಯರ್ಸ್ ಆಸರೆ: ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಕೈಲ್ ಮೇಯರ್ಸ್ ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತ್ತು. 50 ಎಸೆತಗಳನ್ನು ಎದುರಿಸಿದ ಮೇಯರ್ಸ್ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರೆಂಡನ್ ಕಿಂಗ್ 20 ರನ್, ನಾಯಕ ನಿಕೊಲಸ್ ಪೂರನ್ 22 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

ಒಟ್ಟಿನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ವಿಫಲವಾದ್ದರಿಂದ ಗೆಲುವು ಟೀಂ ಇಂಡಿಯಾ ಪಾಲಾಯಿತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *