ಡ್ರೋನ್‌ಗಳನ್ನು ಧ್ವಂಸ ಮಾಡೋ ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ!

ನವದೆಹಲಿ: ಪಾಕಿಸ್ತಾನದ (Pakistan) ಜೊತೆ ಸಂಘರ್ಷ ಜೋರಾಗಿ ನಡೆಯುತ್ತಿರುವಾಗಲೇ ಆತ್ಮನಿರ್ಭರ ಭಾರತದಡಿ ಭಾರತ (India) ಭಾರ್ಗವಾಸ್ತ್ರವನ್ನು (Bhargavastra) ಅಭಿವೃದ್ಧಿ ಪಡಿಸಿದೆ.

ಒಡಿಶಾದ (Odisha) ಗೋಪಾಲಪುರದಲ್ಲಿ ಡ್ರೋನ್ ವಿರೋಧಿ ಭಾರ್ಗವಸ್ತ್ರದಲ್ಲಿ ಪ್ರಯೋಗ ಯಶಸ್ವಿಯಾಗಿದೆ. ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ (SDAL) ಅಭಿವೃದ್ಧಿಪಡಿಸಿದ ಕೌಂಟರ್ ಡ್ರೋನ್ ವ್ಯವಸ್ಥೆ ಮೇ 13ರಂದು ನಡೆಸಿದ ಅತ್ಯಂತ ಕಠಿಣವಾದ 3 ಪರೀಕ್ಷೆಯಲ್ಲೂ ಇದು ಪಾಸ್‌ ಆಗಿದೆ. ಎಲ್ಲಾ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಈ ವರ್ಷದಲ್ಲೇ ಭಾರ್ಗವ ಅಸ್ತ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. ಇದನ್ನೂ ಓದಿ: ಭಾರತ ಕೆಣಕಿ ಹೋಳಾದ ಪಾಕಿಸ್ತಾನ – ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ

ಗೋಪಾಲಪುರದ ಸೀವರ್ಡ್ ಫೈರಿಂಗ್ ರೇಂಜ್‌ನಲ್ಲಿ ಪರೀಕ್ಷಿಸಲ್ಪಟ್ಟ ಈ ವ್ಯವಸ್ಥೆ ಡ್ರೋನ್‌ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. ಆಪರೇಷನ್ ಸಿಂಧೂರ್‌ ವೇಳೆ ಪಾಕ್‌ ಭಾರೀ ಪ್ರಮಾಣದಲ್ಲಿ ಡ್ರೋನ್‌ ದಾಳಿ ನಡೆಸುತ್ತಿತ್ತು. ಭವಿಷ್ಯದಲ್ಲಿ ಈ ರೀತಿಯ ಯಾವುದೇ ದಾಳಿಯನ್ನು ಭಾರ್ಗವಸ್ತ್ರ ತಡೆಯಲಿದೆ.

2 ಸೆಕೆಂಡ್‌ಗಳಲ್ಲಿ 2 ರಾಕೆಟ್‌ ಉಡಾಯಿಸಿದಾಗಲು ಯಶಸ್ವಿಯಾಗಿ ಗುರಿಯನ್ನು ತಲುಪಿದೆ. ಎಲ್ಲಾ ನಾಲ್ಕು ರಾಕೆಟ್‌ಗಳು ಸರಿಯಾಗಿ ಕೆಲಸ ಮಾಡಿದೆ. ಶಸ್ತ್ರಾಸ್ತ್ರಯುಕ್ತ ಡ್ರೋನ್‌ಗಳು ಮತ್ತು ಅಡ್ಡಾಡುವ ಯುದ್ಧಸಾಮಗ್ರಿಗಳ ಬೆದರಿಕೆಯನ್ನು ಈ ಡ್ರೋನ್‌ ಹೊಡೆದು ಹಾಕಲಿದೆ.

5000 ಮೀ. ಎತ್ತರದವರೆಗಿನ ಭೂ ಪ್ರದೇಶದಲ್ಲೂ ಇದು ಕಾರ್ಯನಿರ್ವಹಿಸುವುದು ವಿಶೇಷ. ರೇಡಾರ್‌ನೊಂದಿಗೆ ಡ್ರೋನ್‌ಗಳನ್ನು ಪತ್ತೆ ಮಾಡುತ್ತದೆ ಅಷ್ಟೇ ಅಲ್ಲದೇ ಡ್ರೋನ್‌ಗಳ ಸಮೂಹಗಳನ್ನೇ ತಟಸ್ಥಗೊಳಿಸುತ್ತದೆ. ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

ಸೋಲಾರ್ ಗ್ರೂಪ್‌ನ ಅಂಗಸಂಸ್ಥೆಯಾದ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (EEL) ಅಭಿವೃದ್ಧಿಪಡಿಸಿದ ಭಾರ್ಗವಸ್ತ್ರ ವ್ಯವಸ್ಥೆಯು 2.5 ಕಿ.ಮೀ. ವ್ಯಾಪ್ತಿಯಲ್ಲಿ ಸಣ್ಣ ಮತ್ತು ಒಳಬರುವ ಡ್ರೋನ್‌ಗಳನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಭೂಪ್ರದೇಶಗಳು ಮತ್ತು ಯುದ್ಧ ಸನ್ನಿವೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ರೇಡಾರ್‌ 6 ಕಿ.ಮೀ ದೂರದವರೆಗಿನ ಡ್ರೋನ್‌ಗಳನ್ನು ಪತ್ತೆ ಹಚ್ಚುತ್ತದೆ.