ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

ಭುವನೇಶ್ವರ: ಅರುಣಾಚಲ ಪ್ರದೇಶದ ತವಾಗ್‌ ಗಡಿಯಲ್ಲಿ ಚೀನಾದ(China) ಜೊತೆ ಘರ್ಷಣೆ ನಡೆದಿರುವ ಸಮಯದಲ್ಲೇ ಭಾರತ(India) ಅಣ್ವಸ್ತ್ರ ಸಿಡಿತಲೆಯ ಖಂಡಾಂತರ ಕ್ಷಿಪಣಿ ಅಗ್ನಿ-5ರ(Nuclear Capable Agni-V Ballistic Missile) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

ಬರೋಬ್ಬರಿ 5 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಕ್ಷಿಪಣಿಗೆ ಡಮ್ಮಿ ಸಿಡಿತಲೆಯನ್ನು ಇರಿಸಿ ರಾತ್ರಿ ಒಡಿಶಾದ ಬಾಲಸೋರ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ(ವೀಲರ್) ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ.

5,500 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ತಲುಪುವ ಸಾಮರ್ಥ್ಯ ಅಗ್ನಿ-5 ಕ್ಷಿಪಣಿಗಿದೆ. ಚೀನಾದ ಯಾವುದೇ ಭಾಗವನ್ನು ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿ ಪಡಿಸಿದ 17.5 ಮೀಟರ್ ಎತ್ತರದ ಈ ಕ್ಷಿಪಣಿ 50 ಟನ್ ತೂಕ ಇದೆ. 1.5 ಟನ್ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ.

ಅಕ್ಟೋಬರ್ 2021 ರಲ್ಲಿ ಕೊನೆಯದಾಗಿ ಅಗ್ನಿ-5 ಪರೀಕ್ಷೆ ನಡೆಸಿತ್ತು. ಈ ವೇಳೆ 1998ರ ಯುಎನ್‌ಎಸ್‌ಸಿ ರೆಸಲ್ಯೂಶನ್ 1172 ಅನ್ನು ಉಲ್ಲೇಖಿಸಿ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನಿಲ್ಲಿಸಬೇಕು ಎಂದು ನಿರ್ಣಯವು ಹೇಳಿರುವಾಗ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿತ್ತು. ಭಾರತ 5000-5,500 ಕಿ.ಮೀ ವ್ಯಾಪ್ತಿ ಎಂದು ಹೇಳಿದರೂ ಇದು 8,000 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ದೇಶಗಳಿಂದ ಆತಂಕ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಭಾರತ ಈ ಅಗ್ನಿ 5 ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದೆ ಎಂದು ಚೀನಾ ಆರೋಪಿತ್ತು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು. ನಂತ ವಿವಿಧ ಅಗ್ನಿ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸಿಕೊಂಡು ಬಂದಿದೆ.

ಬ್ಯಾಲಿಸ್ಟಿಕ್ ಕ್ಷಿಪಣಿ ಎಂದರೇನು?
ಈ ಕ್ಷಿಪಣಿಗಳು ಇವು ತಮ್ಮದೇ ಆದ ಚೋದನ ಕ್ರಮಗಳಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ, ಮತ್ತೆ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಸಾಮರ್ಥ್ಯ ಹೊಂದಿರುತ್ತದೆ. ವೇಗವಾಗಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಅತಿ ಹೆಚ್ಚಿನ ತಾಪಮಾನ ಬಿಡುಗಡೆಯಾಗುವುದರಿಂದ ಶತ್ರುಗಳ ಕ್ಷಿಪಣಿಗಳನ್ನೇ ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ನಿಗದಿತ ಗುರಿಯನ್ನು ತಲುಪಲು ಜಿಪಿಎಸ್ ಅಳವಡಿಸಲಾಗಿರುತ್ತದೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತರ್ಗಾಮಿ ಅಲ್ಲದೇ ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *