ವ್ಯವಹಾರ ಕುದುರಿಸಲು ಲಂಚ- ಭಾರತಕ್ಕೆ 82ನೇ ರ್‍ಯಾಂಕ್

BRIBE

ನವದೆಹಲಿ: ವ್ಯವಹಾರ ಕುದುರಿಸಲು ಲಂಚ ಪಡೆಯುವ ದೇಶಗಳ ಜಾಗತಿಕ ಪಟ್ಟಿಯಲ್ಲಿ ಭಾರತ 82ನೇ ಸ್ಥಾನ ಪಡೆದುಕೊಂಡಿದೆ. ಕಳೆದ 77ನೇ ಸ್ಥಾನ ಪಡೆದಿದ್ದ ಭಾರತ, ಈ ವರ್ಷ 5 ಸ್ಥಾನಗಳ ಕುಸಿತ ಕಂಡಿದೆ.

ಲಂಚ ನಿಗ್ರಹ ಗುಣಮಟ್ಟ ನಿಗದಿಪಡಿಸುವ ಸಂಸ್ಥೆಯಾದ “ಟ್ರೇಸ್”, 194 ದೇಶಗಳು, ಸ್ವಾಯತ್ತ, ಅರೆ ಸ್ವಾಯತ್ತ ಪ್ರದೇಶಗಳಲ್ಲಿ ವ್ಯವಹಾರದ ಉದ್ದೇಶಗಳಿಗಾಗಿ ಪಡೆಯುವ ಲಂಚಕ್ಕೆ ಸಂಬಂಧಿಸಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ದೇಶಗಳ ಪಟ್ಟಿ ಮಾಡಿದೆ. ಇದನ್ನೂ ಓದಿ: ಪುನೀತ್ ನಿಧನದಿಂದ ತುಂಬಲಾರದ ನಷ್ಟವಾಗಿದೆ: ವೆಂಕಯ್ಯ ನಾಯ್ಡು

ಟ್ರೇಸ್ ಸಂಸ್ಥೆಯ ಶ್ರೇಯಾಂಕದ ಪ್ರಕಾರ, ಉತ್ತರ ಕೊರಿಯಾ, ತುರ್ಕಮೆನಿಸ್ತಾನ್, ವೆನಿಜುವೆಲಾ, ಎರಿಟ್ರಿಯಾ ವ್ಯವಹಾರದಲ್ಲಿ ಅತಿಹೆಚ್ಚು ಲಂಚ ಪಡೆಯುವ ದೇಶಗಳಾಗಿವೆ. ಡೆನ್ಮಾರ್ಕ್, ನಾರ್ವೆ, ಫಿನ್‍ಲ್ಯಾಂಡ್, ಸ್ವೀಡನ್, ನ್ಯೂಜಿಲೆಂಡ್ ದೇಶಗಳು ಅತಿ ಕಡಿಮೆ ಲಂಚ ಪಡೆಯುವ ದೇಶಗಳಾಗಿ ಹೊರಹೊಮ್ಮಿವೆ.

BRIBE

ಸರ್ಕಾರದೊಂದಿಗಿನ ವ್ಯವಹಾರ ಸಂವಹನ, ಲಂಚ ತಡೆ, ಸರ್ಕಾರ ಮತ್ತು ನಾಗರಿಕ ಸೇವೆಯಲ್ಲಿ ಪಾರದರ್ಶಕತೆ, ಮಾಧ್ಯಮ ಪಾತ್ರವನ್ನು ಒಳಗೊಂಡ ನಾಗರಿಕ ಸಮಾಜದ ಮೇಲ್ವಿಚಾರಣೆ ಸಾಮರ್ಥ್ಯವನ್ನು ಆಧರಿಸಿ ಟ್ರೇಸ್ ಸಂಸ್ಥೆ ಅಂಕಗಳನ್ನು ನೀಡುತ್ತದೆ. ಅದರಲ್ಲಿ 2020ರಲ್ಲಿ ಭಾರತ 45 ಅಂಕಗಳೊಂದಿಗೆ 77ನೇ ಸ್ಥಾನದಲ್ಲಿತ್ತು. ಆದರೆ ಈ ವರ್ಷ 44 ಅಂಕಗಳೊಂದಿಗೆ 82ನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರ್ತಾನೆ: ಜಗ್ಗೇಶ್

ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ನೇಪಾಳ, ಬಾಂಗ್ಲಾದೇಶ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಾನ ಉತ್ತಮ ಸ್ಥಿತಿಯಲ್ಲಿದೆ. ಭೂತಾನ್ ದೇಶ 62ನೇ ರ್‍ಯಾಂಕ್ ಪಡೆದುಕೊಂಡಿದೆ.

Comments

Leave a Reply

Your email address will not be published. Required fields are marked *