ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ

ನವದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆ ಬಂದಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತಗೊಳಿಸಿದೆ. ಇದಲ್ಲದೆ ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭವಾಗಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಕೇಂದ್ರ ಆರೋಗ್ಯ ಇಲಾಖೆ ತಿಳಿಸಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇಂದು ಒಟ್ಟು 3,17,532 ಪ್ರಕರಣ ವರದಿಯಾಗಿದ್ದು, ನಿನ್ನೆಗಿಂತ 12.2% ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಇಂದು 491 ಮಂದಿ ಮರಣಹೊಂದಿದ್ದಾರೆ. ಈ ಮೂಲಕ ಒಟ್ಟು ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 4,87,693ಕ್ಕೆ ಏರಿಕೆ ಕಂಡಿದೆ. ಇದನ್ನೂ ಓದಿ: ಟೆಸ್ಟ್‌ಗೆ ಕಳುಹಿಸಿ 22 ದಿನದ ನಂತರ ಬಂತು ಒಮಿಕ್ರಾನ್ ವರದಿ – ಅಷ್ಟರಲ್ಲಿ ಗುಣಮುಖಳಾಗಿ ಡಿಸ್ಚಾರ್ಜ್‌ ಆಗಿದ್ಲು ಯುವತಿ!

ದೇಶದಲ್ಲಿ 19,24,051 ಸಕ್ರಿಯ ಪ್ರಕರಣಗಳಿವೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹಲವು ಮಾಹಿತಿಗಳನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಈ ಪೈಕಿ ದೇಶದಲ್ಲಿ 515 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ 5%ಗಿಂತ ಹೆಚ್ಚಾಗಿದೆ. 11 ರಾಜ್ಯಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದ ಬಳಿಕ ಅಜ್ಜನ ಭರ್ಜರಿ ಬ್ಯಾಟಿಂಗ್ – ವೀಡಿಯೋ ವೈರಲ್

ಭಾರತದಲ್ಲಿ ಮೂರನೇ ಅಲೆ ದೃಢ ಪಟ್ಟಿದ್ದು, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಡೆಲ್ಲಿ ಮತ್ತು ಉತ್ತರ ಪ್ರದೇಶಕ್ಕೆ ಹೈಅಲರ್ಟ್ ಘೋಷಣೆ ಮಾಡಿದೆ. ಕೇಂದ್ರ ತಂಡ ಈ ರಾಜ್ಯಗಳಿಗೆ ಭೇಟಿ ಕೊಡಲಿದೆ ಎಂದು ಆರೋಗ್ಯ ಇಲಾಖೆ ಘೋಷಿಸಿದೆ. ಇದನ್ನೂ ಓದಿ: ಜನರಿಗೆ ಸಹಾಯವಾಗುವ ನಿರ್ಧಾರ ನಾಳೆ ಪ್ರಕಟ : ಅಶೋಕ್

Comments

Leave a Reply

Your email address will not be published. Required fields are marked *