ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಹಾಗೂ ಕೋವಿಡ್ ಪ್ರಭಾವದಿಂದ ಇಡೀ ವಿಶ್ವವೇ ನಲುಗಿ ಹೋಗಿ, ಆರ್ಥಿಕತೆ ಕುಗ್ಗುವ ಆತಂಕದಲ್ಲಿದೆ. ಆದರೆ ಭಾರತದ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದ ಚೇತರಿಕೆ ಕಾಣುತ್ತಿದೆ.

ಹೌದು, ಭಾರತ ಇದೀಗ ಚೀನಾವನ್ನೇ ಮೀರಿಸುವಷ್ಟು ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ದಿ ಹೊಂದುತ್ತಿದೆ. 2022ನೇ ಇಸವಿಯಲ್ಲಿ ಭಾರತ ಶೇ.8.2 ರಷ್ಟು ಪ್ರಗತಿ ಕಾಣಲಿದೆ. ಇದು ಜಗತ್ತಿನಲ್ಲಿಯೇ ಅತೀ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಿಳಿಸಿದೆ. ಇದನ್ನೂ ಓದಿ: 12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

 

ಚೀನಾದ ಪ್ರಗತಿ ದರ ಶೇ.4.4 ರಷ್ಟು ಇದ್ದು, ಭಾರತ ಇದರ ದುಪ್ಪಟ್ಟು ವೇಗದಲ್ಲಿ ಅಭಿವೃದ್ದಿ ಹೊಂದುತ್ತಿದೆ. 2021ರ ಜಾಗತಿಕ ಆರ್ಥಿಕ ದರ ಶೇ.6.1 ಇದ್ದು, ಈ ವರ್ಷ ಶೇ.3.6 ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಿದೆ. ಇದನ್ನೂ ಓದಿ: ಇಂದು ಸಂಜೆಯೊಳಗೆ ಶರಣಾಗಿ – ನಾಪತ್ತೆಯಾಗಿರುವ 8 ಹುಬ್ಬಳ್ಳಿ ಪುಂಡರಿಗೆ ಡೆಡ್‌ಲೈನ್‌

ಕೆಲವು ತಿಂಗಳ ಹಿಂದೆ ಐಎಂಎಫ್ 2022ರ ಭಾರತದ ಆರ್ಥಿಕತೆ ಶೇ.9.1 ಇರಲಿದೆ ಎಂದು ತಿಳಿಸಿತ್ತು. ಇದೀಗ ಐಎಂಎಫ್ ಈ ಅಂದಾಜನ್ನು ಪರಿಷ್ಕರಿಸಿ, ಶೇ.0.8 ರಷ್ಟು ಕಡಿಮೆ ಮಾಡಿದೆ. 2023ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.6.9 ಇರಲಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *