ವಿಡಿಯೋ: ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆಯ ಪ್ರತ್ಯುತ್ತರ- 60 ಸೆಕೆಂಡ್‍ಗಳಲ್ಲಿ ಪಾಕ್ ಸೇನೆಯ ಬಂಕರ್ ಚಿಂದಿ

ನವದೆಹಲಿ: ಕಾಶ್ಮೀರದಲ್ಲಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಿರುಗೇಟು ನೀಡಿದೆ.

ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟಾರ್‍ನ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಪಾಕ್ ಬಂಕರ್ ಧ್ವಂಸಗೊಳಿಸಿದೆ. ಗುರಿಯಿಟ್ಟು ಕೇವಲ 60 ಸೆಕೆಂಡ್‍ಗಳಲ್ಲಿ ಬಂಕರ್ ಧ್ವಂಸಗೊಳಿಸಿರುವ ವಿಡಿಯೋದ ಬಗ್ಗೆ ಟೈಮ್ಸ್ ನೌ ವರದಿ ಮಾಡಿದೆ.

ಯಶಸ್ವಿಯಾಗಿ ಗುರಿಯನ್ನ ಸಾಧಿಸಿದ್ದೇವೆ ಎಂದು ಯೋಧರು ಹೇಳುವುದನ್ನ ವಿಡಿಯೋದಲ್ಲಿ ಕೇಳಬಹುದು. ಸರ್, ಶೆಲ್ ಗುರಿಯನ್ನ ಹೊಡೆದಿದೆ. ನಾವು ಅದನ್ನ ಧ್ವಂಸಗೊಳಿಸಿದ್ದೇವೆ ಎಂದು ಯೋಧರೊಬ್ಬರು ಹೇಳಿರೋದು ವಿಡಿಯೋದಲ್ಲಿ ದಾಖಲಾಗಿದೆ.

ಮೇ 1ರಂದು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿ ಪೈಶಾಚಿಕ ಕೃತ್ಯವೆಸಗಿದ್ದರು. ಇದಕ್ಕೆ ತಕ್ಕ ಉತ್ತರ ನೀಡುವುದಾಗಿ ಭಾರತೀಯ ಸೇನೆ ಹೇಳಿತ್ತು.

ಏಪ್ರಿಲ್ ನಲ್ಲಿ ನಡೆದ ದಾಳಿ: ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಸೇನೆಯ ಮೂಲಗಳು ಮಾಹಿತಿ ನೀಡಿದ್ದು,  ಯೋಧರ ಶಿರಚ್ಛೇದನ ಮಾಡಿದ್ದಕ್ಕೆ ಈ ದಾಳಿ ನಡೆದಿಲ್ಲ. ಈ ಘಟನೆ ನಡೆಯುವ ಮೊದಲೇ ಏಪ್ರಿಲ್ ನಲ್ಲಿ ನಡೆದ ದಾಳಿ ಎಂದು ಸ್ಪಷ್ಠೀಕರಣ ನೀಡಿವೆ.

https://www.youtube.com/watch?v=UlOlfHILH2Q

Comments

Leave a Reply

Your email address will not be published. Required fields are marked *