ಕೊಹ್ಲಿ-ಧೋನಿಗಿಂತ ದುಬಾರಿ ಕಾರಿನ ಒಡೆಯರಾದ ಪಾಂಡ್ಯ ಬ್ರದರ್ಸ್

ಮುಂಬೈ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಸಹೋದರರು ಮತ್ತೊಂದು ದುಬಾರಿ ಕಾರು ಖರೀದಿಸಿ, ಸುದ್ದಿಯಾಗಿದ್ದಾರೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ 2.19 ಕೋಟಿ ರೂ. ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯನ್ನು ಹಾರ್ದಿಕ್ ಪಾಂಡ್ಯ ತಮ್ಮದಾಗಿಸಿಕೊಂಡಿದ್ದರು. ಸದ್ಯ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಹಾಗೂ ವಿಂಡೀಸ್ ಪ್ರವಾಸದಿಂದ ವಾಪಸ್ ಆಗಿರುವ ಕೃನಾಲ್ ಪಾಂಡ್ಯ ಮುಂಬೈನಲ್ಲಿ ದುಬಾರಿ ಲ್ಯಾಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರನ್ನು ಖರೀದಿಸಿದ್ದಾರೆ.

https://www.instagram.com/p/B1Oeo8PhO8_/?utm_source=ig_embed

ಲಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರಿನ ಪ್ರಸ್ತುತ ಬೆಲೆಯು 3.73 ಕೋಟಿ ರೂ. (ಎಕ್ಸ್ ಶೋ ರೂಂ) ಆಗಿದೆ. ಪಾಂಡ್ಯ ಬ್ರದರ್ಸ್ ಸದ್ಯ ಇಂತಹದೊಂದು ದುಬಾರಿ ಮೌಲ್ಯದ ಕಾರಿನ ಒಡೆಯರಾಗಿದ್ದಾರೆ.

ಕಾರು ಪ್ರಿಯರಾಗಿರುವ ಪಾಂಡ್ಯ ಬ್ರದರ್ಸ್ ಭಾರತ ತಂಡ ಪ್ರವೇಶಿಸುವ ಮುನ್ನ ಲೋನ್ ಮೂಲಕ ಕಾರು ಖರೀದಿಸಿದ್ದರು. ಆದರೆ ಐಪಿಎಲ್ ನಲ್ಲಿ ದುಬಾರಿ ಬೆಲೆ ಪಡೆದಿರುವ ಅವರಿಬ್ಬರು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಮಿಂಚುತ್ತಿದ್ದಾರೆ. ಇದೀಗ ಇವರ ಬಳಿ ದುಬಾರಿ ಕಾರುಗಳಾದ ಲ್ಯಾಂಡ್ ರೋವರ್, ರೇಂಜ್ ರೋವರ್, ಮರ್ಸಡೀಸ್ AMG g63, ಆಡಿ A6 ಕಾರುಗಳ ಜೊತೆಗೆ ಲ್ಯಾಂಬೋರ್ಗಿನಿ ಸೇರಿಕೊಂಡಿದೆ.

https://www.instagram.com/p/B1OEwF4nMls/?utm_source=ig_embed

ಕಾರಿನ ವಿಶೇಷತೆ ಏನು?:
ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಂಬೋರ್ಗಿನಿ ಹುರಾಕನ್ ಇವಿಒ ಅನ್ನು ಬಿಡುಗಡೆ ಮಾಡಲಾಯಿತು. 0-100 ಕಿಮೀ ವೇಗ ಪಡೆಯಲು ಈ ಕಾರು ತೆಗೆದುಕೊಳ್ಳುವ ಸಮಯ ಕೇವಲ 2.9 ಸೆಕೆಂಡುಗಳು ಮಾತ್ರ.

ಪಾಂಡ್ಯ ಬ್ರದರ್ಸ್ ಮಾತ್ರವಲ್ಲದೆ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ ಸೇರಿದಂತೆ ಹಲವು ಆಟಗಾರರು ದುಬಾರಿ ಕಾರುಗಳ ಕಲೆಕ್ಷನ್ ನಲ್ಲಿ ಮಂಚೂಣಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *