ಲಾಹೋರ್‌ ಮೇಲೆ ಭಾರತ ಮಿಸೈಲ್‌ ಸುರಿಮಳೆ – ತತ್ತರಿಸಿದ ಪಾಕ್‌ ಜನ

– ಕರಾಚಿ, ಇಸ್ಲಾಮಾಬಾದ್‌ ಸೇರಿ ಪಾಕ್‌ನ 4 ನಗರಗಳ ಮೇಲೆ ಡೆಡ್ಲಿ ಅಟ್ಯಾಕ್‌

ನವದೆಹಲಿ: ಜಮ್ಮು ಮೇಲೆ ಪಾಕ್‌ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್‌ ಆಗಿ ಭಾರತ ಲಾಹೋರ್‌ (Lahore) ಮೇಲೆ ಮಿಸೈಲ್‌ಗಳ ಸುರಿಮಳೆ ಗರೆದಿದೆ.

ಪಾಕಿಸ್ತಾನದ (Pakistan) ಹಲವು ಪ್ರದೇಶಗಳ ಮೇಲೆ ಭಾರತದಿಂದ (India) ಪ್ರತಿದಾಳಿ ನಡೆದಿದೆ. ಭಾರತದ ದಾಳಿಗೆ ಪಾಕ್ ನಾಗರಿಕರು ತತ್ತರಿಸಿದ್ದಾರೆ. ಲಾಹೋರ್, ಕರಾಚಿ, ಇಸ್ಲಾಮಾಬಾದ್‌ನ‌ ಹಲವು ಪ್ರದೇಶಗಳಲ್ಲಿ ಭಾರತ ಏಕಕಾಲಕ್ಕೆ ಕ್ಷಿಪಣಿ, ಡ್ರೋನ್ ದಾಳಿ ನಡೆದಿದೆ. ಪಾಕಿಸ್ತಾನದ ಮಿಲಿಟರಿ ಕ್ಯಾಂಪ್‌ಗಳ‌ ಮೇಲೂ ದಾಳಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: ಭಾರತದ ಮೇಲೆ ಪಾಕ್‌ನಿಂದ 100 ಕ್ಷಿಪಣಿ ದಾಳಿ

ಭಾರತದ ದಾಳಿ ಪಾಕಿಸ್ತಾನ ಅಕ್ಷರಶಃ ಬೆಚ್ಚಿಬಿದ್ದಿದೆ. ಪಾಕ್‌ನ ಹಲವೆಡೆ ವಿದ್ಯುತ್‌ ಕಡಿತಗೊಳಿಸಲಾಗಿದೆ.