ತಕ್ಷಣವೇ ಉಕ್ರೇನ್‌ ರಾಜಧಾನಿ ತೊರೆಯಿರಿ: ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

ನವದೆಹಲಿ: ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಈಗಿಂದೀಗಲೇ ತೊರೆಯಿರಿ ಎಂದು ಭಾರತ ಮೂಲದ ನಾಗರಿಕರಿಗೆ ರಾಯಭಾರಿ ಕಚೇರಿ ತಿಳಿಸಿದೆ.

ಉಕ್ರೇನ್‌ ರಾಜಧಾನಿಯಲ್ಲಿರುವ ಭಾರತೀಯ ಮೂಲದವರು ಈ ಕೂಡಲೇ ಕೀವ್‌ ಅನ್ನು ತೊರೆಯಿರಿ. ರೈಲು ಅಥವಾ ಇನ್ನಿತರ ಲಭ್ಯ ಸಾರಿಗೆ ವ್ಯವಸ್ಥೆ ಮೂಲಕ ರಾಜಧಾನಿಯಿಂದ ಹೊರಡಿ ಎಂದು ಉಕ್ರೇನ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

ಕೀವ್‌ನ ವಾಯುವ್ಯ ರಸ್ತೆಗಳಲ್ಲಿ ರಷ್ಯಾ ಸೇನಾ ವಾಹನಗಳಿರುವ ಉಪಗ್ರಹ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಈ ಸಲಹೆಯನ್ನು ಪೋಸ್ಟ್ ಮಾಡಲಾಗಿದೆ. ಯುಎಸ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ನೂರಾರು ಟ್ಯಾಂಕ್‌ಗಳು, ಫಿರಂಗಿಗಳು, ಶಸ್ತ್ರಸಜ್ಜಿತ ಮತ್ತು ಲಾಜಿಸ್ಟಿಕ್ ವಾಹನಗಳಿವೆ. ಕೀವ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಹೆಚ್ಚಿನ ದಾಳಿಯಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

ಯುದ್ಧಪೀಡಿತ ರಾಷ್ಟ್ರ ಉಕ್ರೇನ್‌ನಲ್ಲಿ 16,000 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಉಕ್ರೇನ್‌ ಬಂಕರ್‌ಗಳು, ಮೆಟ್ರೋ ನಿಲ್ದಾಣಗಳು, ಬಾಂಬ್‌ ಸೆಲ್ಟರ್‌ಗಳಲ್ಲಿ ಅಡಗಿರುವ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬೇಡಿಕೆ ಇಡುತ್ತಿರುವ ಫೋಟೋ, ವೀಡಿಯೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್

ಇದುವರೆಗೆ 8,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಉಕ್ರೇನ್‌ನ ಪೂರ್ವ ಭಾಗಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *