ಓವಲ್‍ನಲ್ಲಿಂದು ಚಾಂಪಿಯನ್ಸ್ ಫೈನಲ್ ವಾರ್ – ಪಾಕ್ ಕ್ರಿಕೆಟ್ ಯುದ್ಧಕ್ಕೆ ಟೀಂ ಇಂಡಿಯಾ ರೆಡಿ

ಲಂಡನ್: ಇಂದು ಕ್ರಿಕೆಟ್‍ನಲ್ಲಿ ಮಹಾಯುದ್ಧ ನಡೆಯಲಿದೆ. ಪಾಕ್ ಬೇಟೆಗೆ ಭಾರತ ಕಾದು ಕುಳಿತಿದೆ. ನೆರೆ ರಾಷ್ಟ್ರ ಕೂಡ ಗೆಲುವಿಗೇ ಕಣ್ಣಿಟ್ಟಿದೆ.

1985ರ ವಿಶ್ವಚಾಂಪಿಯನ್‍ಶಿಪ್ ಕ್ರಿಕೆಟ್ ಫೈನಲ್‍ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿತ್ತು. ಆ ಬಳಿಕ ಇಂಟರ್‍ನ್ಯಾಷನಲ್ ಒನ್‍ಡೇ ಫೈನಲ್‍ನಲ್ಲಿ ಭಾರತ -ಪಾಕ್ ಎದುರಾಗೇ ಇರ್ಲಿಲ್ಲ. 32 ವರ್ಷಗಳ ಬಳಿಕ ಅಂತರಾಷ್ಟ್ರೀಯ ಏಕದಿನದಲ್ಲಿ ಭಾರತ-ಪಾಕ್ ಇಂದು ಭಾರೀ ಯುದ್ಧಕ್ಕೆ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‍ಗೆ ಇಂಗ್ಲೆಂಡ್‍ನ ಓವಲ್ ಕೂಡ ರೆಡಿಯಾಗಿದೆ.

ಟೀಂ ಇಂಡಿಯಾದ ಪ್ಲಸ್ ಪಾಯಿಂಟ್‍ಗಳು ಇಲ್ಲಿವೆ.
* ಉತ್ತಮವಾಗಿರುವ ಬ್ಯಾಟಿಂಗ್ ಲೈನ್‍ಅಪ್
* ಫಾರ್ಮ್‍ನಲ್ಲಿರುವ ಧವನ್, ರೋಹಿತ್ ಶರ್ಮಾ, ಯುವಿ, ಕೊಹ್ಲಿ
* ತಂಡಕ್ಕೆ ನೆರವಾಗುತ್ತಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ
* ಚಾಂಪಿಯನ್ಸ್ ಲೀಗ್‍ನಲ್ಲಿ ಸಾಂಘಿಕ ಹೋರಾಟ ನಡೆಸಿರುವುದು
* ಪ್ರಮುಖ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಗೆದ್ದು ಭಾರತ ಆತ್ಮವಿಶ್ವಾಸದಲ್ಲಿರೋದು

 

ಟೀಂ ಇಂಡಿಯಾ ಮೈನಸ್ ಪಾಯಿಂಟ್
* ದುಬಾರಿಯಾಗುತ್ತಿರುವ ಬೌಲರ್ಸ್.
* ಎದುರಾಳಿಗಳನ್ನ ಕಟ್ಟಿಹಾಕುವಲ್ಲಿ ಬೌಲರ್ಸ್ ವಿಫಲವಾಗುತ್ತಿರೋದು.
* ಕ್ಷೇತ್ರ ರಕ್ಷಣೆ ಇನ್ನಷ್ಟು ಬಲವಾಗಬೇಕು.

ಎದುರಾಳಿ ತಂಡದ ಪ್ಲಸ್ ಮತ್ತು ಮೈನಸ್ ಪಾಯಿಂಟ್‍ಗಳನ್ನು ಕೆಳಗೆ ನೀಡಲಾಗಿದೆ.
ಪಾಕಿಸ್ತಾನ ಪ್ಲಸ್ ಪಾಯಿಂಟ್
* ಯುವ ಪಡೆಯ ಬ್ಯಾಟಿಂಗ್ ಪವರ್.
* ಫಾರ್ಮ್‍ನಲ್ಲಿರುವ ನಾಯಕ ಸರ್ಫರಾಜ್ .
* ಗಾಯಾಳು ಮೊಹಮದ್ ಅಮಿರ್ ತಂಡಕ್ಕೆ ಮರಳುತ್ತಿರೋದು.
* ಸೆಮಿ ಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಾಕ್.

ಪಾಕಿಸ್ತಾನ ಮೈನಸ್ ಪಾಯಿಂಟ್
* ಕಳಪೆ ಕ್ಷೇತ್ರ ರಕ್ಷಣೆ, ಕ್ಯಾಚ್‍ಗಳನ್ನ ಕೈಚೆಲ್ಲುತ್ತಿರೋದು.
* ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಬ್ಯಾಟ್ಸ್‍ಮನ್‍ಗಳ ವಿಫಲವಾಗ್ತಿರೋದು.
* ತಂಡಕ್ಕೆ ಕಾಡುತ್ತಿರುವ ಗಾಯಾಳುಗಳ ಸಮಸ್ಯೆ.
* ಅನುಭವಿ ಆಟಗಾರರ ಕೊರತೆ.

4 ಕಾರಣಗಳಿಂದಾಗಿ ಭಾರತ ಗೆಲ್ಲಲೇಬೇಕು:
1. ಯೋಧರಲ್ಲಿ ಆತ್ಮಸ್ಥೈರ್ಯ: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕ್ರೀಡೆಯ ಒಂದು ಭಾಗವಾಗಿದ್ದರೂ, ಇದೊಂದು ಭಾವನಾತ್ಮಕ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಪಾಕಿಸ್ತಾನ ತೆಗೆಯುತ್ತಿರುವ ಕ್ಯಾತೆಗೆ, ಯೋಧರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ಆತ್ಮಬಲ ತುಂಬಲು ಇಂದಿನ ಗೆಲುವು ಅನಿವಾರ್ಯವಾಗಿದೆ.

2. ಹಾಲಿ ಚಾಂಪಿಯನ್ ಪಟ್ಟ ಉಳಿವು: ಭಾರತ ತಂಡ ಹಾಲಿ ಚಾಂಪಿಯನ್ ಟ್ರೋಫಿಯ ವಿಜೇತ ತಂಡವಾಗಿದ್ದು, 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಹೀಗಾಗಿ ಈ ಬಾರಿಯೂ ಭಾರತ ಪ್ರಶಸ್ತಿ ಸುತ್ತಿಗೇರಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.

3. ಐಸಿಸಿಯಲ್ಲಿ ದಾಖಲೆ ಮುಂದುವರಿಕೆ: ಐಸಿಸಿ ಆಯೋಜಿಸುವ ಯಾವುದೇ ಟೂರ್ನ್‍ಮೆಂಟ್ ಗಳಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಈ ವರೆಗೂ 2 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ಅಂತೆಯೇ ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಅಜೇಯ ದಾಖಲೆ ಮುಂದುವರೆದಿದೆ. ಹೀಗಾಗಿ ಭಾರತ ತನ್ನ ಈ ದಾಖಲೆಯನ್ನು ಮುಂದವೆರಸಲು ಹೋರಾಡಬೇಕಿದೆ.

5.ನಂ ರ್ 1 ಸ್ಥಾನಕ್ಕೇರಲು ಅವಕಾಶ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತಕ್ಕೆ ಎಷ್ಟು ಪ್ರಮುಖವೆಂದರೆ, ಫೈನಲ್ ಪಂದ್ಯವನ್ನು ಭಾರತ ಜಯಿಸಿದ್ದೇ ಆದರೆ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತದೆ. ಪ್ರಸ್ತುತ 119 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದು, 117 ಅಂಕಗಳನ್ನು ಹೊಂದಿರುವ ಭಾರತ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯ ಗೆದ್ದರೆ ಆಗ ಭಾರತದ ಅಂಕ 119ಕ್ಕೇರಿಕೆಯಾಗಲಿದೆ. ಆ ಮೂಲಕ ಭಾರತ ಆಗ್ರ ಸ್ಥಾನಕ್ಕೇರಲಿದ್ದು, ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಕುಸಿಯಲಿದೆ.

 

 

Comments

Leave a Reply

Your email address will not be published. Required fields are marked *