ಎಥೆನಾಲ್ ಉತ್ಪಾದನೆಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಒಂದೆಡೆ ತೈಲಬೆಲೆ ಏರಿಕೆ ಸಾಮಾನ್ಯ ಜನರ ಗಾಯದ ಮೇಲೆ ಬರೆ ಎಳೀತಿದೆ. ಮತ್ತೊಂದೆಡೆ ಎಲೆಕ್ಟ್ರಾನಿಕ್ ವಾಹನಗಳ ದರ ಮಧ್ಯಮ ವರ್ಗಕ್ಕೆ ಕೈಗೆಟುಕುತ್ತಿಲ್ಲ. ಹೀಗಾಗಿ ಎಥೆನಾಲ್ ಉತ್ಪಾದನೆಗೆ ಹೆಚ್ಚು ಮಣೆ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

2025ರ ವೇಳೆಗೆ ಎಥೆನಾಲ್ ಉತ್ಪಾದನೆ ಶೇ.20ರಷ್ಟು ಹೆಚ್ಚಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 2020-21ನೇ ಸಾಲಿನಲ್ಲಿ ಎಥೆನಾಲ್‍ಗೆ ಹೆಚ್ಚಿನ ಬೆಲೆ ನೀಡಲು ಅನುಮೋದನೆ ನೀಡಿದೆ. ಕಬ್ಬು ಆಧಾರಿತ ನಾನಾ ಕಚ್ಚಾ ಸಾಮಗ್ರಿಗಳಿಂದ ಪಡೆದ ಎಥೆನಾಲ್‍ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇದನ್ನೂ ಓದಿ: ಇದು ಹುಚ್ಚುತನವೋ ಅಥವಾ ದೇಶದ್ರೋಹವೋ – ಕಂಗನಾ ವಿರುದ್ಧ ವರುಣ್ ಗಾಂಧಿ ಕಿಡಿ

ಸದ್ಯ 332 ಕೋಟಿ ಲೀಟರ್ ಎಥೆನಾಲ್‍ನ ಪೆಟ್ರೋಲ್‍ಗೆ ಮಿಕ್ಸ್ ಮಾಡಲಾಗುತ್ತಿದೆ. 2025-26ರ ವೇಳೆಗೆ 1,016 ಕೋಟಿ ಲೀಟರ್‍ಗಳಿಗೆ ಹೆಚ್ಚಿಸಲು ಗುರಿ ಇಟ್ಟುಕೊಂಡಿದೆ. ಎಥೆನಾಲ್ ಬಳಕೆಯಿಂದ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಕಡಿಮೆಯಾಗಲಿದ್ದು, ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಎಥೆನಾಲ್ ಉತ್ಪಾದನೆಗೆ ಆಹಾರ ಪದಾರ್ಥಗಳನ್ನು ಬಳಸುವುದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  ಇದನ್ನೂ ಓದಿ: ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

ಈ ನಡುವೆ ಪ್ರತಿ ಲೀಟರ್ ಎಥೆನಾಲ್ ಮೇಲೆ 2.5 ರೂ ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಡಿಸೆಂಬರ್ 1 ರಿಂದ ಈ ಹೊಸ ಬೆಲೆ ಅನ್ವಯವಾಗಲಿದ್ದು, ಈ ಹಿಂದೆ ನವೆಂಬರ್ 10 ರಂದು ಎಥನಾಲ್ ಬೆಲೆಯನ್ನು 80 ಪೈಸೆ ಏರಿಕೆ ಮಾಡಿತ್ತು. ಪ್ರಸ್ತುತ ಎಥನಾಲ್ ಬೆಲೆ 62.65 ರೂ. ಇದ್ದು, 63.45 ರೂ.ಗೆ ಏರಿಕೆ ಕಾಣಲಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *