ಬಾಲಿವುಡ್ ನಲ್ಲಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ

ವೀರ ಸಾವರ್ಕರ್ ನಿಲುವಿನ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರ ಬಯೋಪಿಕ್ ಸಿನಿಮಾವಾಗಿ ಮೂಡಿ ಬರುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಗೆಲುವು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದೆ. ಇದನ್ನೂ ಓದಿ : ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

ಭಾರತೀಯ ಸಿನಿಮಾ ರಂಗದಲ್ಲಿ ಸದ್ಯ ಬಯೋಪಿಕ್ ಟ್ರೆಂಡ್ ಭರ್ಜರಿಯಾಗಿದೆ. ಅದರಲ್ಲೂ ವಿವಾದಿತ ವ್ಯಕ್ತಿಗಳ ಮೇಲಿನ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲೂ ಸಖತ್ ಸದ್ದು ಮಾಡುತ್ತಿವೆ. ಹೀಗಾಗಿ ಇಂದು ಬಾಲಿವುಡ್ ನಲ್ಲಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಅನೌನ್ಸ್ ಆಗಿದೆ. ಇದನ್ನೂ ಓದಿ:  ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

ಮಹೇಶ್ ಮಾಂಜ್ರೇಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾವರ್ಕರ್ ಪಾತ್ರವನ್ನು ಬಾಲಿವುಡ್ ಖ್ಯಾತ ನಟ ರಣದೀಪ್ ಹೂಡ ಮಾಡಲಿದ್ದಾರೆ. ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ : ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

ಈ ಕುರಿತು ಮಾತನಾಡಿರುವ ರಣದೀಪ್ ಹೂಡ “ಇಂಥದ್ದೊಂದು ಪಾತ್ರ ನನಗೆ ಸಿಕ್ಕಿದ್ದು ಮತ್ತು ವೀರ ಸಾವರ್ಕರ್ ಪಾತ್ರವನ್ನು ನಾನೂ ಮಾಡುತ್ತಿರುವುದು ನನಗೆ ಸಿಕ್ಕಿರುವ ದೊಡ್ಡ ಗೌರವವಿದು’ ಎಂದಿದ್ದಾರೆ.ಮುಂದುವರೆದು ಮಾತನಾಡಿರುವ ಅವರು, “ವಿನಾಯಕ ದಾಮೋದರ ಸಾವರ್ಕರ್ ಕುರಿತಾಗಿ ಈಗಾಗಲೇ ಸಾಕಷ್ಟು ತಪ್ಪು ಕಲ್ಪನೆಗಳನ್ನು ಬಿತ್ತಲಾಗಿದೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಷ್ಟೋ ಮಹಾತ್ಮರ ಚರಿತ್ರೆಗಳು ಜನರಿಗೆ ತಲುಪಿಲ್ಲ. ಹಾಗೂ ಸಾವರ್ಕರ್ ಸಾಧನೆಯ ಬಗ್ಗೆ ಈ ಹೊತ್ತಿನಲ್ಲಿ ಜನರಿಗೆ ತಿಳಿಸಬೇಕಾಗಿದ್ದು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಿನಿಮಾ ಸಹಾಯವಾಗಲಿದೆ’ ಎಂದಿದ್ದಾರೆ ಹೂಡ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

ಸಾವರ್ಕರ್ ಕುರಿತಾಗಿ ಈಗಲೂ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಅವರ ಹೋರಾಟಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸಲಾಗುತ್ತಿದೆ. ಸಾವರ್ಕರ್ ಸಾಧನೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೂಡ ಇದೆ. ಹಾಗಾಗಿ ಈ ಸಿನಿಮಾ ಮಹತ್ವ ಪಡೆದುಕೊಳ್ಳಲಿದೆ.

Comments

Leave a Reply

Your email address will not be published. Required fields are marked *