ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

ಬೆಂಗಳೂರು: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ತೋರಿ ಎಸ್ಕೇಪ್‌ ಆಗಿದ್ದ ಆರೋಪಿಯನ್ನು 10 ದಿನಗಳ ನಂತರ ಸುದ್ದಗುಂಟೆಪಾಳ್ಯ ಪೊಲೀಸರು (Suddagunte Palya Police) ಕೇರಳದಲ್ಲಿ ಬಂಧಿಸಿದ್ದಾರೆ. ಆದ್ರೆ ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳಕ್ಕೆ (Kerala) ಹೋಗೋದಕ್ಕೆ ಆತನ ಪ್ರೇಯಸಿ ಹೋಮ್‌ ಗಾರ್ಡ್‌ ಸಾಥ್‌ ನೀಡಿದ್ದಾಳೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಹೌದು. ಭಾನುವಾರ (ಏ.13) ಕೇರಳದ ಹಳ್ಳಿಯೊಂದರಲ್ಲಿ ಆರೋಪಿ ಸಂತೋಷ್ ಡೇನಿಯಲ್‌ನನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದರು. ಕೋರ್ಟ್‌ಗೆ ಹಾಜರುಪಡಿಸುವುದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಆರೋಪಿ ಕೃತ್ಯ ಎಸಗಿದ್ದು ತಾನೇ ಎಂಬುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಆರೋಪಿ ಸಂತೋಷ್ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagara Police Station) ಈ ಹಿಂದೆ ದಾಖಲಾಗಿದ್ದ ಕಳ್ಳತನ ಕೇಸ್ ಪತ್ತೆ ಮಾಡಿ ಫೋನ್ ನಂಬರ್ ಟ್ರ್ಯಾಕ್ ಮಾಡೋಕೆ ಶುರುಮಾಡಿದ್ದಾರೆ. ದನ್ನೂ ಓದಿ: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌

ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದನಂತೆ. ಬೆಂಗಳೂರಲ್ಲಿ ಡ್ರೈವಿಂಗ್ ಕೆಲಸ (Driving Work) ಮಾಡುತ್ತಿದ್ದಾಗ ಪರಿಚಯವಾಗಿದ್ದ ಸ್ನೇಹಿತ‌‌ ಮನೆಗೆ ಹೋಗಿ ಆಶ್ರಯ ಪಡೆದುಕೊಂಡಿದ್ದನಂತೆ. ಅಲ್ಲದೇ ಆರೋಪಿ ಎಸ್ಕೇಪ್ ಆಗಿದ್ದರ ಹಿಂದೆ ಲವ್ ಸ್ಟೋರಿಯ ಮಾತುಗಳು ಕೇಳಿಬರ್ತಿವೆ. ಪ್ರಕರಣ ದಾಖಲಿಸಿದಾಗಿನಿಂದ ಪೊಲೀಸರ ಹುಡುಕಾಟದ ಇಂಚಿಚೂ ಮಾಹಿತಿಯನ್ನ ಸಂತೋಷ್‌ನ ಹೋಮ್‌ ಗಾರ್ಡ್ ಪ್ರೇಯಸಿ ನೀಡಿದ್ದಾಳೆ. ಟಿವಿ ನೋಡಿಕೊಂಡು ಆರೋಪಿ‌ ತಪ್ಪಿಸಿಕೊಳ್ಳಲು ಹೋಮ್‌ ಗಾರ್ಡ್ ಪ್ರೇಯಸಿ ಸಹಾಯ ಮಾಡಿದ್ದಾಳೆ. ಪೊಲೀಸರು ನಿನ್ನನ್ನ ಹುಡುಕುತ್ತಿದ್ದಾರೆ ಹುಷಾರು ಅಂತ ಅಲರ್ಟ್‌ ಮಾಡಿದ್ದಾಳೆ. 2 ದಿನದ ಬಳಿಕ ಹೊಸ ಸಿಮ್ ಖರೀದಿ ಮಾಡಿ ಪ್ರಿಯಕರ ಸಂತೋಷನಿಗೆ ಪ್ರೇಯಸಿ ನೀಡಿದ್ದಾಳೆ. ಸಂತೋಷ್ ಜೊತೆಯೇ ಬಸ್ ಹಿಡಿದು ಕೇರಳಕ್ಕೆ ಕೂಡ ಹೋಗಿದ್ದಾಳೆ. ಹೊಸ ಸಿಮ್‌ನಲ್ಲಿ ತಾಯಿಗೆ ಕರೆ ಮಾಡಿ ಕೇರಳದಲ್ಲಿರೋದಾಗಿ ಸಂತೋಷ್ ತಿಳಿಸಿದ್ದಾನೆ‌. ದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು

ಮಾಹಿತಿ ಆಧರಿಸಿ ಆರೋಪಿ ಮೊಬೈಲ್ ನಂಬರ್ ಟ್ರೇಸ್ ಮಾಡಿ ಲೊಕೆಷನ್‌ ಪಡೆದಿಕೊಂಡ ಪೊಲೀಸರು ಕೇರಳದ ಕೋಝಿಕೋಡ್‌ನ ಲಾಡ್ಜ್‌ನಲ್ಲಿದ್ದಾಗ ಇಬ್ಬರನ್ನೂ ಬಂಧಿಸಿದ್ದಾರೆ. ದನ್ನೂ ಓದಿ:  ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ