ದುಬೈ: ಟಿ20 ವಿಶ್ವಕಪ್ ವೇಳೆ ಗೃಹ ಸಚಿವ ಅಮಿತ್ ಶಾ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ರೆಂಡಿಂಗ್ ಆಗಿದ್ದಾರೆ.
ಶಾಹಿನ್ ಅಫ್ರಿದಿ ಎಸೆದ 19ನೇ ಓವರಿನ 6ನೇ ಎಸೆತವನ್ನು ಹಾರ್ದಿಕ್ ಪಾಂಡ್ಯ ಬೌಂಡರಿಗೆ ಅಟ್ಟಿದ್ದರು. ಇದು ನೋಬಾನ್ ಆದ ಕಾರಣ ಅಂಪೈರ್ ಫ್ರಿ ಹಿಟ್ ನೀಡಿದರು.
https://twitter.com/Vamos_Akshay/status/1452301635716276230
ಈ ಎಸೆತವನ್ನು ಹೊಡೆಯಲು ಪಾಂಡ್ಯ ವಿಫಲರಾದರು. ಆದರೆ ಒಂದು ರನ್ ಓಡಿದರು. ಈ ಸಂದರ್ಭದಲ್ಲಿ ಕೀಪರ್ ರಿಜ್ವಾನ್ ವಿಕೆಟ್‌ಗೆ ಬಾಲ್ ಎಸೆದರೂ ಅದು ತಾಗದೇ ಅಫ್ರಿದಿಗೆ ಕೈಗೆ ಸಿಕ್ಕಿತು. ಇದನ್ನೂ ಓದಿ: ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭ – ಮಾರ್ಗಸೂಚಿ ಏನು?
https://twitter.com/HiteshY23384055/status/1452306945713573896
ಬಾಲ್ ಸಿಕ್ಕಿದ ಕೂಡಲೇ ಅಫ್ರಿದಿ ಚೆಂಡನ್ನು ನಾನ್ ಸ್ಟ್ರೈಕ್‌ನಲ್ಲಿದ್ದ ವಿಕೆಟ್‌ಗೆ ಎಸೆದರು. ಆದರೆ ಬಾಲ್ ವಿಕೆಟಿಗೆ ಸಿಗದೇ ಫೀಲ್ಡರ್‌ಗಳ ಕೈಗೆ ಸಿಗದೇ ಬೌಂಡರಿ ಗೆರೆ ದಾಟಿತು. ಈ ಮೂಲಕ ಬೈ ರೂಪದಲ್ಲಿ 5 ರನ್ ಬಂತು.
ಬಾಲ್ ಬೌಂಡರಿಗೆ ಹೋಗುತ್ತಿದ್ದಂತೆ ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಜಯ್ ಶಾ, ಅಕ್ಷಯ್ ಕುಮಾರ್ ಜೊತೆ ನಿಂತು ಒಂದು ಕೈಯನ್ನು ಎತ್ತಿ ಸಂಭ್ರಮಿಸಿದರು. ಜಯ್ ಶಾ ಅವರ ಸಂಭ್ರಮಾಚಾರಣೆ ವಿಡಿಯೋ ಈಗ ಟ್ರೆಂಡಿಂಗ್ ಆಗಿದೆ.

Leave a Reply