ಐತಿಹಾಸಿಕ ಪಂದ್ಯದಲ್ಲಿ ಡಕೌಟ್‌ ಆಗಿ ಕೆಟ್ಟ ದಾಖಲೆ ಬರೆದ ರೋಹಿತ್‌ ಶರ್ಮಾ

ಇಂದೋರ್: ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. ಆದರೆ ಇದೇ ಐತಿಹಾಸಿಕ ಪಂದ್ಯದಲ್ಲಿ ಕೆಟ್ಟ ದಾಖಲೆಯನ್ನೂ ಬರೆದಿದ್ದಾರೆ.

150 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಹಿಟ್‌ಮ್ಯಾನ್‌ ಹೊರಹೊಮ್ಮಿದ್ದಾರೆ. ಇವರ ನಂತರದ ಸ್ಥಾನವನ್ನು ಐರ್ಲೆಂಡ್‌ನ ಪೌಲ್‌ ಸ್ಟೀರ್ಲಿಂಗ್‌ ಈವರೆಗೆ ಒಟ್ಟು 134 ಟಿ20 ಪಂದ್ಯಗಳನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಮೈಲುಗಲ್ಲು ಸಾಧಿಸುವ ಸನಿಹದಲ್ಲಿ ರೋಹಿತ್‌ – ನೆಟ್ಸ್‌ನಲ್ಲಿ ಬೆವರಿಳಿಸಿದ ಹಿಟ್‌ಮ್ಯಾನ್‌

ICC ಪುರುಷರ T20 ವಿಶ್ವಕಪ್ 2022 ರ ಅಂತ್ಯದ ನಂತರ ರೋಹಿತ್ ಮೊದಲ ಬಾರಿಗೆ ಭಾರತದ T20Iಗೆ ಮರಳಿದ್ದರು. ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಯಲ್ಲಿ 100 ಗೆಲುವು ದಾಖಲಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಐತಿಹಾಸಿಕ ಪಂದ್ಯದಲ್ಲೇ ಕೆಟ್ಟ ದಾಖಲೆ
ಇಂದು ಅಫ್ಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಪಂದ್ಯದಲ್ಲೇ ರೋಹಿತ್‌ ಶರ್ಮಾ ಕೆಟ್ಟ ದಾಖಲೆ ಬರೆದರು. ತಾನು ಎದುರಿಸಿದ ಮೊದಲ ಬಾಲ್‌ಗೆ ಔಟಾಗಿ ಶೂನ್ಯ ಸುತ್ತಿ ನಿರ್ಗಮಿಸಿದರು. ಇದನ್ನೂ ಓದಿ: ಆಫ್ಘನ್ ತಂಡದ ವಿರುದ್ಧ ಭಾರತ ಗೆಲುವು – ಜೈಸ್ವಾಲ್, ದುಬೆ ಅರ್ಧ ಶತಕ

ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಒಟ್ಟು 12 ಬಾರಿ ಡಕೌಟ್​ ಆಗಿದ್ದಾರೆ. ಯಾರೂ ಸಹ ಇಷ್ಟು ಬಾರಿ ಭಾರತದ ಆಟಗಾರರು ಟಿ20 ಕ್ರಿಕೆಟ್​ನಲ್ಲಿ ರನೌಟ್ ಆಗಿಲ್ಲ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ 2ನೇ ಸ್ಥಾನದಲ್ಲಿದ್ದು, ಟಿ20 ಕ್ರಿಕೆಟ್​ನಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.