ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ

ಬೆಂಗಳೂರು: ಪುಡಿರೌಡಿಗಳ ಹಾವಳಿಯಿಂದ ಜನ ಹೈರಣಾಗಿ ಹೋಗಿದ್ದಾರೆ. ಪುಂಡರ ಹಾವಳಿಂದ ರೋಸಿಹೋಗಿರೋ ಸಾರ್ವಜನಿಕರು ಕಿರಾತಕರ ಕಿರುಕುಳವನ್ನ ತಡೆಗಟ್ಟುವಂತೆ ಟ್ವೀಟ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಹಲಸೂರು ಮಾರುಕಟ್ಟೆ ಸುತ್ತಮತ್ತ ಓಡಾಡುವ ಮಹಿಳೆಯರಿಗೆ, ಜನರಿಗೆ ಅಭದ್ರತೆ ಕಾಡುತ್ತಿದೆ. ಕಿರಾತಕರು ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ ಮಾಡಿ ಅಸಭ್ಯ ಪದಗಳಿಂದ ನಿಂದನೆ ಮಾಡ್ತಾರೆ. ಪುಡಾರಿಗಳ ಪುಂಡಾಟವನ್ನ ಪ್ರಶ್ನೇಮಾಡಿದವರನ್ನು ಹಲ್ಲೆ ಮಾಡಿ ರಾಜಾರೋಷವಾಗಿ ಅಲ್ಲೇ ಓಡಾಡಿಕೊಂಡು ಇರ್ತಾರೆ. ಇದನ್ನೂ ಓದಿ: ಸೈಬರ್ ಮೋಸದ ಜಾಲದಕ್ಕೆ ಸಿಕ್ಕಿ 1.48 ಲಕ್ಷ ಕಳೆದುಕೊಂಡ ನಟಿ!

ಕಿಡಿಗೇಡಿಗಳಿಗಳಿಗೆ ಸ್ಥಳೀಯ ಪೊಲೀಸರ ಭಯವಂತು ಇಲ್ಲದಂತಾಗಿದೆ ದಯವಿಟ್ಟು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪುಂಡರ ವಿರುದ್ಧ ಕ್ರಮ ಜರಗಿಸುವಂತೆ ಟ್ವೀಟ್ ಮೂಲಕ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *