‘ಕೈ’ ಮುಖಂಡನ ಮನೆ ಮೇಲೆ IT ದಾಳಿ- 20 ಅಧಿಕಾರಿಗಳ ತಂಡದಿಂದ ಪರಿಶೀಲನೆ

ಬೆಂಗಳೂರು: ಕಾಂಗ್ರೆಸ್ ಮುಖಂಡರೊಬ್ಬರ ಮನೆ ಮೇಲೆ ಐಟಿ (Income Tax) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆಲಮಂಗಲ ನಗರದ ಅರಿಶಿನಕುಂಟೆಯ ಮನೆ ಮೇಲೆ ದಾಳಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ವೆಂಕಟ್ ರಾಜು (Congress Leader Venkat Raj) ಮನೆಗೆ 6 ಕಾರುಗಳಲ್ಲಿ ಬಂದಿರುವ ಸುಮಾರು 20 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಚರಣೆ ನಡೆಯುತ್ತಿದ್ದು, ಮನೆಯಲ್ಲಿ ಅಧಿಕಾರಿಗಳು ಇಂಚಿಂಚು ಪರಿಶೀಲನೆ ನಡೆಸಿದ್ದಾರೆ. ನಾಲ್ಕು ಬೆಡ್ ರೂಂ, ಶೌಚಾಲಯ, ದೇವರ ಗುಡಿ, ಆಫೀಸ್ ಹೀಗೆ ಎಲ್ಲಾ ಭಾಗಗಳನ್ನು ಪರಿಶೀಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹಣ ರವಾನೆಯಾಗಿದೆ ಎಂಬ ಅನುಮಾನದಲ್ಲಿ ಈ ಪರಿಶೀಲನೆ ನಡೆದಿದೆ. ಸಾಕಷ್ಟು ದಾಖಲೆಗಳ ಪರಿಶೀಲನೆ ಹಣ ವಹಿವಾಟಿನ ಬಗ್ಗೆ ಮಾಹಿತಿ ಹಾಗೂ ಮನೆಯಲ್ಲಿ ಹಣ ಸಿಕ್ಕಿದೆ ಎನ್ನಲಾಗಿದ್ದು, ಸಿಕ್ಕಿರುವ ದಾಖಲೆಗಳ ಬಗ್ಗೆ ಅಧಿಕಾರಿಗಳು ಪಂಚನಾಮೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬುಧವಾರ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ

ವೆಂಕಟ್ ರಾಜು ಕಚೇರಿಯ ಕಬೋರ್ಡ್‍ಗಳನ್ನ ಸೀಲ್ ಮಾಡಿದ್ದಾರೆ. ಮನೆಯಲ್ಲಿ ಚಿನ್ನಾಭಾರಣ ಹಾಗೂ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಇದ್ದು, ಕೋಟಿ ಗಟ್ಟಲೆ ಜಮೀನು ನಿವೇಶನದ ದಾಖಲೆ ವಶಕ್ಕೆಯುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.