ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧ ಪ್ರಮಾಣ 12 ದಿನವಾದ್ರೂ ಇಂದಿಗೂ ಮುಂದುವರೆದಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವಿದ್ಯಾರ್ಥಿಗಳು ಹೈ ರಿಸ್ಕ್ ತೆಗೆದುಕೊಂಡು ಭಾರತಕ್ಕೆ ಅಗಮಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಮಲ್ಲೇನಹಳ್ಳಿಯ ರಮೇಶ್ ಮತ್ತು ಸವಿತಾ ದಂಪತಿ ಮಗಳು ಅಕ್ಷಿತಾ ಸುರಕ್ಷಿತವಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ ಓದುತ್ತಿದ್ದ ಅಕ್ಷಿತಾ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಉಕ್ರೇನ್ ಯುದ್ಧ ಅರಂಭವಾದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿ ಮನೆಗೆ ಬಂದ ಮಗಳನ್ನು ಪೋಷಕರು ಅಪ್ಪಿ ಮುದ್ದಾಡಿದ್ದಾರೆ. ಇದನ್ನೂ ಓದಿ: ಮುದ್ದಿನ ಸಾಕುಪ್ರಾಣಿಗಳಾದ ಪ್ಯಾಂಥರ್, ಚಿರತೆ ಇಲ್ಲದೇ ದೇಶಕ್ಕೆ ಮರಳಲ್ಲ: ಭಾರತೀಯ ವೈದ್ಯ

ಅಕ್ಷಿತಾಳಿಗೆ ಆರತಿ ಬೆಳಗಿ ತಾಯಿ ಸವಿತಾ ಸ್ವಾಗತಿಸಿದ್ದು, ನಂತರ ಸಿಹಿ ತಿನ್ನಿಸಿ ಆನಂದಿಸಿದ ಬಂಧು-ಬಾಂಧವರು. 8 ದಿನಗಳ ಕಾಲ ಘೋರ ಯುದ್ಧಭೂಮಿ ಖಾರ್ಕಿವ್ ನಲ್ಲಿ ಸಿಲುಕಿದ್ದ ಅಕ್ಷಿತಾ ಮಾಧ್ಯಮಗಳೊಂದಿಗೆ ಮಾತಾನಾಡಿದ್ದು, ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆ ನಮಗೆ ಇರಲಿಲ್ಲ. ಐದೈದು ನಿಮಿಷಕ್ಕೂ ಬಾಂಬಿಂಗ್, ಶೆಲ್ಲಿಂಗ್ ಆಗುತ್ತಿತ್ತು. ಬಾಂಬ್ ಸಿಡಿತ ಮೊರೆತಗಳ ನಡುವೆ ಕಾಲ ಕಳೆಯಬೇಕಾಗಿತ್ತು. ಅಷ್ಟು ದಿನಗಳ ಕಾಲ ಬಂಕರ್‍ನಲ್ಲಿಯೇ ಆಶ್ರಯ ಪಡೆದಿದ್ದು, ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ. ಲಿವ್ಯುವ್ ಒಂದಷ್ಟು ಸುರಕ್ಷಿತವಾದ ಸ್ಥಳವಾಗಿತ್ತು. ಆದರೆ ಅಲ್ಲಿಗೆ ತಲುಪುವುದಕ್ಕೆ 1500 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಅಲ್ಲಿಂದ ಪೋಲೆಂಡ್ ಮೂಲಕ ದೆಹಲಿ ತಲುಪಿದ್ದೆವು. ಅದಕ್ಕೆಲ್ಲ ಮೋದಿ ಜೀ ಸರ್ಕಾರ ತುಂಬಾ ಸಹಾಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

Comments

Leave a Reply

Your email address will not be published. Required fields are marked *