ಭೀಕರ ಬರವಿದ್ರೂ ಫಾರಿನ್ ಟೂರ್ ಮೂಡಲ್ಲಿ ಗೃಹಸಚಿವರು & ಟೀಂ

ರಕ್ಷಾಕಟ್ಟೆಬೆಳಗುಳಿ
ಬೆಂಗಳೂರು: ರಾಜ್ಯದ ಜನ ಭೀಕರ ಬರದಿಂದ ತತ್ತರಿಸುತ್ತಿದ್ದಾರೆ. ಕ್ಷೇತ್ರದ ಜನ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಜೊತೆಗಿದ್ದು ಸಮಸ್ಯೆ ಬಗೆ ಹರಿಸಬೇಕಾದವರು ಮಾತ್ರ ಫಾರಿನ್ ಟೂರ್ ಮೂಡ್‍ನಲ್ಲಿದ್ದಾರೆ.

ಹೌದು. ಬರದ ಸಮಸ್ಯೆಗೆ ಪರಿಹಾರ ಹುಡುಕಬೇಕಿರುವ ಗೃಹಸಚಿವ ಜಿ.ಪರಮೇಶ್ವರ್, ಬೇಸಿಗೆ ಧಗೆಯಿಂದ ಸ್ವಲ್ಪ ಕೂಲ್ ಆಗಿ ಬರಲು ಕಾನ್ಫರೆನ್ಸ್ ಹೆಸರಲ್ಲಿ ತಮ್ಮ ಹಳೇ ಟೀಂನೊಂದಿಗೆ ಫಾರಿನ್ ಟೂರ್ ಹೊರಟಿದ್ದಾರೆ.

2016ರ ಜೂನ್‍ನಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ, ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್, ಪ್ರವೀಣ್ ಸೂದ್ ಅವರನ್ನೊಳಗೊಂಡ ಇದೇ ಟಿಂನೊಂದಿಗೆ ಡಾ. ಜಿ ಪರಮೇಶ್ವರ್ 10 ದಿನಗಳ ಕಾಲ ಜರ್ಮನಿ ಸುತ್ತಿ ಬಂದಿದ್ದರು. ಟ್ರಿಪ್ ಮುಗಿದ ಬೆನ್ನಲ್ಲೇ ಪ್ರವೀಣ್ ಸೂದ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರಮೋಷನ್ ಪಡೆದರು. ಮತ್ತೆ ಅದೇ ಟೀಂ ಜೊತೆ ಇದೇ ತಿಂಗಳ 7 ರಂದು ಸರ್ಕಾರಿ ಖರ್ಚಿನಲ್ಲಿ ಲಂಡನ್ ಫ್ಲೈಟ್ ಹತ್ತಲು ರೆಡಿಯಾಗಿದ್ದಾರೆ ಪರಮೇಶ್ವರ್.

ಅವ್ರೇ ಯಾಕೆ?
ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನ ಐಪಿಎಸ್ ಅಧಿಕಾರಿಗಳಿರುವಾಗ ಪದೇ ಪದೇ ಡಾ.ಜಿ ಪರಮೆಶ್ವರ್ ತಮ್ಮ ಟೂರ್‍ಗಳಿಗೆ ಇದೇ ಟೀಂ ಅನ್ನು ಆಯ್ಕೆ ಮಾಡ್ತಿರೋದ್ಯಾಕೆ? ಜೊತೆಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಸ್ವಯಂ ನಿವೃತ್ತಿ ತಗೆದುಕೊಂಡ ಕೆಂಪಯ್ಯ ಅವರು ಫಾರಿನ್ ಕಾನ್ಫರೆನ್ಸ್ ಗಳ  ಮೇಲೆ ಇಷ್ಟೊಂದು ಒಲವು ತೋರುತ್ತಿರುವ ಬಗ್ಗೆಯೂ ಗೃಹ ಇಲಾಖೆಯಲ್ಲಿ ಈಗ ಪಿಸು ಪಿಸು ಮಾತು ಶುರುವಾಗಿದೆ.

ಕರ್ತವ್ಯದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಮಂತ್ರಿಗಳು ಮತ್ತು ಪೊಲೀಸ್ ಅಧಿಕಾರಿಗಳು ವರ್ಷಕ್ಕೆ ಎರಡೂ ಫಾರಿನ್ ಟೂರ್ ಮಾಡುತ್ತಿರುವುದು ಎಷ್ಟು ಸರಿ ಎನ್ನುವುದೇ ನಮ್ಮ ಪ್ರಶ್ನೆ.

Comments

Leave a Reply

Your email address will not be published. Required fields are marked *