ಮೇ ತಿಂಗಳಿನಲ್ಲಿ 65 ಸಾವು – ಮೃತ್ಯು ಕೂಪವಾಗಿದೆ ಕೊಪ್ಪಳ ಜಿಲ್ಲಾಸ್ಪತ್ರೆ

ಕೊಪ್ಪಳ: ಜೀವ ಉಳಿಸಬೇಕಾದ ಸರ್ಕಾರಿ ಆಸ್ಪತ್ರೆ ಈಗ ಜೀವ ತೆಗೆಯುವ ಆಸ್ಪತ್ರೆಯಾಗಿ ಬದಲಾಗಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ (Koppal District Hospital) ಮೇ ಒಂದೇ ತಿಂಗಳಿನಲ್ಲಿ 65 ಮಂದಿ ಮೃತಪಟ್ಟಿದ್ದಾರೆ.

ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ರೋಗಿಗಳ ಸಂಖ್ಯೆ 354. ಕೊಪ್ಪಳದ ಕಿಮ್ಸ್ ಆಡಳಿತ ಮಂಡಳಿಯೇ ಈ ಅಂಕಿ ಅಂಶಗಳನ್ನು ನೀಡಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಐಸಿಯು ಬೆಡ್‌ ಇಲ್ಲ. ಸರಿಯಾದ ವೈದ್ಯರಿಲ್ಲ ಎಂಬ ಹಲವು ದೂರುಗಳು ಈ ಆಸ್ಪತ್ರೆಯ ಮೇಲಿದೆ. ಇದನ್ನೂ ಓದಿ:  ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್‌ ಪಾಂಡ್ಯ ಈಗ ಎಲ್ಲಿದ್ದಾರೆ?

ಸದ್ಯ ಈ ಆಸ್ಪತ್ರೆಯಲ್ಲಿಸಾವು ಹೆಚ್ಚಾಗುತ್ತಿದ್ದರೂ ಕಿಮ್ಸ್ ಆಡಳಿತ ಮಂಡಳಿ ಇಲ್ಲಿ ಏನು ನಡೆದಿಲ್ಲ ಎಂಬಂತೆ ವರ್ತನೆ ಮಾಡುತ್ತಿದೆ. ಸಾವಿನ ಸಂಖ್ಯೆಯ ಬಗ್ಗೆ ಕಿಮ್ಸ್ ನಿರ್ದೇಶಕ ವಿಜಯ ಇಟಗಿ ಅವರನ್ನ ಕೇಳಿದರೆ ಅವರು ಬೇರೆಯೇ ಉತ್ತರ ನೀಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ನಮ್ಮಲ್ಲಿ ಬಂದು ಒಂದೇ ದಿನದಲ್ಲಿ ಸಾವನ್ನಪ್ಪುತ್ತಾರೆ. ಹೀಗಾಗಿ ನಮ್ಮಲ್ಲಿ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.

ಕೂಡಲೇ ಸರ್ಕಾರ ಹಾಗೂ ಆಡಳಿತ ಮಂಡಳಿ ಜನರಿಗೆ ಉತ್ತಮ ಸೇವೆ ನೀಡುವತ್ತ ಗಮನ ಹರಿಸಬೇಕಿದೆ.