ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್

ಮುಂಬೈ: ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಕೂಗುವುದನ್ನು ವಿರೋಧಿಸಿರುವ ರಾಜಕೀಯ ನಾಯಕರು, ಆಜಾನ್ ಕೂಗುವ ಸಮಯಕ್ಕೇ ಮೈಕ್‍ನಲ್ಲಿ ಹನುಮಾನ್ ಚಾಲೀಸಾ ಹಾಕುವಂತೆ ಅಭಿಯಾನ ಆರಂಭಿಸಿದ್ದಾರೆ.

ಈ ಅಭಿಯಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಉಚಿತವಾಗಿ ಲೌಡ್ ಸ್ಪೀಕರ್‌ಗಳನ್ನು ವಿತರಣೆ ಮಾಡೋದಕ್ಕೂ ನಿರ್ಧರಿಸಿದ್ದಾರೆ. ಈ ಸ್ಪೀಕರ್‌ಗಳ ಮೂಲಕ ಹಿಂದೂಗಳು ಹನುಮಾನ್ ಚಾಲೀಸಾ ಅಥವಾ ಹರ ಹರ ಮಹದೇವ ಘೋಷ ವಾಕ್ಯ ಪ್ರಸಾರ ಮಾಡಬಹುದು. ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಇದಕ್ಕೆ ಸಾಥ್ ನೀಡಬೇಕು ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್

ಮುಂಬೈನಲ್ಲಿ ಕಳೆದ ವಾರ ಮರಾಠಿ ಹೊಸ ವರ್ಷ ಗುಡಿ ಪಡ್ವಾ ವೇಳೆ ನೀಡಿದ್ದ ಕರೆ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಮುಸ್ಲಿಮರು ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಕೂಗುವ ವೇಳೆ ಹಿಂದೂಗಳು ಕೂಡಾ ಮೈಕ್‍ಗಳಲ್ಲಿ ಹನುಮಾನ್ ಚಾಲೀಸಾ ಹಾಡಬೇಕು ಎಂದು ರಾಜ್ ಠಾಕ್ರೆ ನೀಡಿದ್ದ ಕರೆಗೆ ಓಗೊಟ್ಟು ಮಹಾರಾಷ್ಟ್ರದ ಹಲವೆಡೆ ಈಗಾಗಲೇ ದೇಗುಲಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಹನುಮಾನ್ ಚಾಲೀಸಾ ಹಾಕಲಾಗುತ್ತಿದೆ.

ಮೋಹಿತ್ ಕಾಂಬೋಜ್ ಯಾರು?: ಇವರು ಮಹಾರಾಷ್ಟ್ರ ಬಿಜೆಪಿಯ ಅತ್ಯಂತ ಸಿರಿವಂತ ನಾಯಕ ಎಂದೇ ಹೆಸರುವಾಸಿ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮುಸ್ಲಿಮರ ಆಜಾನ್‍ಗೆ ವಿರುದ್ಧವಾಗಿ ಹಿಂದೂಗಳು ಭಜನೆ ಹಾಡಬೇಕು ಎಂದು ಕರೆ ಕೊಟ್ಟ ಬೆನ್ನಲ್ಲೇ ಬಿಜೆಪಿ ಕೂಡಾ ಸಜ್ಜಾಗಿದೆ.

Comments

Leave a Reply

Your email address will not be published. Required fields are marked *