ಇತಿಹಾಸದಲ್ಲೇ ಮೊದಲ ಬಾರಿಗೆ 25 ಸಚಿವರಿಗೆ ಖಾತೆಯಿಲ್ಲ- ಅನಂತ್ ಕುಮಾರ್

ಬೆಂಗಳೂರು: ಮತದಾನದ ಬಳಿಕ ರಾಜ್ಯಾದ್ಯಂತ ವಿಧಾನಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ನಾನೂ ಸಹ ಇಂದು ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮತ ಹಾಕಿದ್ದೇನೆ. ನಮ್ಮ ಎಲ್ಲ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರಕ್ಕೆ ದಿಕ್ಕು-ದೆಸೆ ಏನೂ ಇಲ್ಲ. ಸರ್ಕಾರ ಅತಂತ್ರ ಪರಿಸ್ಥಿತಿಯಲ್ಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ 25 ಸಚಿವರು ಖಾತೆ ರಹಿತರಾಗಿದ್ದಾರೆ. ಸರ್ಕಾರ ರಚನೆ ಆದ ಮೇಲೂ 25 ಸಚಿವರು ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿಕೆಯಲ್ಲಿ ಎರಡೂ ಪಕ್ಷಗಳಲ್ಲಿ ಬಿಕ್ಕಟ್ಟು ತಲೆದೂರಿದೆ. ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಪುನರ್ ಸಮೀಕರಣ ನಡೆಯಲಿದೆ ಅಂದ್ರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಇಷ್ಟವಿಲ್ಲ. ಈ ಮೈತ್ರಿ ಸರಕಾರ ರಾಜ್ಯದ ಜನತೆಗೂ ಇಷ್ಟವಿಲ್ಲ. ಸರಕಾರ ಬಿಕ್ಕಟ್ಟು ಮತ್ತೊಂದು ರಾಜಕೀಯ ಪುನರ್ ಸಮೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಆರ್ ಎಸ್ ಎಸ್ ಕಚೇರಿಯಲ್ಲಿ ಪ್ರಣಬ್ ಮುಖರ್ಜಿ ಭಾಷಣದ ವಿಚಾರದ ಕುರಿತು ಮಾತನಾಡಿದ ಅವರು, ಪ್ರಣಬ್ ಮುಖರ್ಜಿ ಒಬ್ಬ ಮುತ್ಸದ್ದಿ ರಾಜಕಾರಣಿ. ಅವರು ಗುರುವಾರ ಆರ್ ಎಸ್ ಎಸ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ್ದಾರೆ. 80 ವರ್ಷಗಳಿಂದ ದೇಶ ಸೇವೆ ಮಾಡುತ್ತಲೇ ಬಂದಿರುವ ಸಂಘಕ್ಕೆ ಒಂದು ಸಮರ್ಥನೆ ಸಿಕ್ಕಿಂತಾಗಿದೆ. ಪ್ರಣಬ್ ಮುಖರ್ಜಿ ಭಾಷಣ, ಸಂಘವನ್ನು ಪ್ರೀತಿಸುವ ಹಾಗೂ ಸಂಘವನ್ನು ವಿರೋಧಿಸುವವರಿಗೆ ಒಂದು ಸಂದೇಶ ರವಾನಿಸಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *