ಸದ್ಯದಲ್ಲೇ ನಿಗಮ ಮಂಡಳಿ, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಪರಮೇಶ್ವರ್

ಬೆಂಗಳೂರು: ಸದ್ಯದಲ್ಲಿಯೇ ನಿಗಮ ಮಂಡಳಿ ಹಾಗೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜುಲೈ 18 ರಂದು ದೆಹಲಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಸದರ ಸಭೆ ನಡೆಯಲಿದೆ. ಹೀಗಾಗಿ ಆ ವೇಳೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಜುಲೈ 20ಕ್ಕೆ ಕಾವೇರಿ ನದಿಗೆ ಬಾಗಿನ ಅರ್ಪಣೆ ಮಾಡಲಾಗುತ್ತದೆ ಎಂದರು.  ಇದನ್ನು ಓದಿ: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

ಗಾಲ್ಫ್ ಚೆಂಡು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸದ ಅಂಗಳಕ್ಕೆ ಬಿದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪರಿಶೀಲನೆ ಮಾಲಾಗುತ್ತದೆ. ಅಲ್ಲದೆ ಗಾಲ್ಫ್ ಕ್ಲಬ್ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ, ಮೈದಾನದ ಸುತ್ತ ಇರುವ ರಕ್ಷಣಾ ಬಲೆ ಎತ್ತಿರಿಸುವ ಕುರಿತು, ಇಲ್ಲವೇ ಸಾಧ್ಯಗಳಿದ್ದರೆ ಗಾಲ್ಫ್ ಮೈದಾನ ಸ್ಥಳಾಂತರ ಮಾಡಬಹುದೇ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿ, ಕೃಷ್ಣಾ ಹಾಗೂ ಕಾವೇರಿ ನಿವಾಸಗಳಿಗೆ ಪ್ರತ್ಯೇಕ ರಕ್ಷಣಾ ದಳ ರಚಿಸುವ ಯೋಜನೆ ಇದೆ. ಈ ದಳದಲ್ಲಿ ನೂರು ಜನ ಸಿಬ್ಬಂದಿ ಇರಲಿದ್ದು, ಇದಕ್ಕೆ ಹೈ ಸೆಕ್ಯೂರಿಟಿ ಜೋನ್ ಎಂದು ಘೋಷಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *