ಬಿಜೆಪಿಯ 6 ಶಾಸಕರು ನಮ್ಮ ಟಚ್ ನಲ್ಲಿದ್ದಾರೆ- ಸಚಿವ ಎಂಬಿ ಪಾಟೀಲ್

ಬೆಂಗಳೂರು: ಬಿಜೆಪಿಯ ಆರು ಮಂದಿ ನಮ್ಮ ಟಚ್ ನಲ್ಲಿದ್ದಾರೆ ಅಂತ ಸಚಿವ ಎಂಬಿ ಪಾಟೀಲ್ ಹೇಳಿದ್ದು, ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಶಾಸಕರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ನಮ್ಮಲ್ಲಿ ಯಾವ ಶಾಸಕರ ಮೇಲೂ ಅನುಮಾನವಿಲ್ಲ. ಎಲ್ಲರೂ ಗಟ್ಟಿಯಾಗಿದ್ದಾರೆ. ಶಾಸಕಾಂಗದ ಸಭೆಗೆ ಕೆಲವರು ಬರುತ್ತಾ ಇದ್ದಾರೆ. ಇನ್ನುಳಿದವರು ಈಗಾಗಲೇ ಬಂದಿದ್ದಾರೆ. ಹೀಗಾಗಿ ಹರಿದಾಡುತ್ತಿರುವ ಊಹಾಪೋಹಗಳೆಲ್ಲ ಸುಳ್ಳು. ಉಲ್ಟಾ ಬಿಜೆಪಿಯ 6 ಮಂದಿ ಶಾಸಕರು ನಮ್ಮೊಂದಿಗಿದ್ದಾರೆ. ಆದ್ರೆ ಅವರು ಯಾರು ಅಂತ ಹೇಳಕ್ಕಾಗಲ್ಲ ಅಂತ ಹೇಳುವ ಮೂಲಕ ಸಚಿವರು ನುಣುಚಿಕೊಂಡರು.

ರಾಜ್ಯ ಚುನಾವಣಾ ಫಲಿತಾಂಶ ಮಂಳವಾರ ಹೊರಬಿದ್ದಿದ್ದು, ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ರೆ ಸರ್ಕಾರ ರಚನೆಗೆ ಸಾಧ್ಯವಾಗದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಮುಂದಾಗಿವೆ. ಈ ಮಧ್ಯೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಾಳೆಯೇ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ. ಅಲ್ಲದೇ ಅಪರೇಷನ್ ಫ್ಲವರ್ ಎಂಬ ಹೆಸರಿನಡಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಮುರಿಯಲು ಪ್ರಯತ್ನಿಸುತ್ತಿದೆ. ಇತ್ತ ಆಪರೇಷನದ ಕಮಲಕ್ಕೆ ಬೆದರಿದ ಕಾಂಗ್ರೆಸ್, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ರೆಸಾರ್ಟ್ ನತ್ತ ಮುಖಮಾಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.

Comments

Leave a Reply

Your email address will not be published. Required fields are marked *