ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

ಹೈದರಾಬಾದ್: ಪ್ರಖ್ಯಾತ ಐಫೋನ್ ತಯಾರಕಾ ಕಂಪೆನಿ ಆಪ್ ಇದೇ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್‍ಗಾಗಿ ಭಾರತಕ್ಕೆ ಬರುತ್ತಿದೆ.

ಈ ವರ್ಷ ಹೈದರಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಗೆ ಕ್ಯಾಂಪಸ್ ಸಂದರ್ಶನಕ್ಕೆ ಆಪಲ್ ಬರಲಿದೆ.

ಇದೇ ಮೊದಲ ಬಾರಿಗೆ ಕ್ಯಾಂಪಸ್ ಸಂದರ್ಶನಕ್ಕೆ ಬರುವುದಾಗಿ ಆಪಲ್ ತಿಳಿಸಿದೆ. ಆಪಲ್ ಸಂಸ್ಥೆಗೆ ಬೇಕಾಗಿರುವ ಅರ್ಹತೆ ಇರುವ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೂ ಆಪಲ್ ನಮ್ಮಲ್ಲಿಗೆ ಬರುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಹೈದರಾಬಾದ್ ಐಐಟಿಯ ಉದ್ಯೋಗ ಸೆಲ್ ವಿಭಾಗದ ಮುಖ್ಯಸ್ಥ ಟಿ.ವಿ. ದೇವಿ ಪ್ರಸಾದ್ ತಿಳಿಸಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಾಗಿ ಉದ್ಯೋಗಿಗಳನ್ನು ನೇಮಿಸುವ ಸಲುವಾಗಿ ಆಪಲ್ ಭಾರತಕ್ಕೆ ಆಗಮಿಸುತ್ತಿದೆ ಎನ್ನಲಾಗುತ್ತಿದೆ. ಆಪಲ್ ಅಲ್ಲದೇ ಮೈಕ್ರೋಸಾಫ್ಟ್, ಗೂಗಲ್, ಪಿಲಿಪ್ಸ್ ಕಂಪೆನಿಗಳು ಹೈದರಾಬಾದ್ ಐಐಟಿಗೆ ಕ್ಯಾಂಪಸ್ ಸಂದರ್ಶನಕ್ಕೆ ಬರುವುದಾಗಿ ಹೇಳಿದೆ.

ಡಿಸೆಂಬರ್ ನಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದ್ದು, ಬಿಇ, ಬಿಟೆಕ್, ಎಂಟೆಕ್, ಎಂಎಸ್‍ಸಿ 350 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಕ್ಕೆ ಹೆಸರು ನೊಂದಾಯಿಸಿದ್ದಾರೆ.

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ಡೇಟಾ ಸೈನ್ಸ್, ಆಟೋಮೆಷನ್ ವಿಭಾಗದಲ್ಲಿ ಉದ್ಯೋಗಗಳಿವೆ. ಈ ವರ್ಷ ಹಾರ್ಡ್ ವೇರ್ ಎಂಜಿನಿಯರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಮತ್ತು ಡಿಸೈನ್ ವೆರಿಫಿಕೇಶನ್, ಅಷ್ಟೇ ಅಲ್ಲದೇ ಮೊಬೈಲ್ ಸಂವಹನಕ್ಕಾಗಿ 2ಡಿ- 3ಡಿ ಗ್ರಾಫಿಕ್ ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದು ಪ್ರಸಾದ್ ತಿಳಿಸಿದರು.

Comments

Leave a Reply

Your email address will not be published. Required fields are marked *