41 ತಿಂಗಳಲ್ಲಿ ಬರೋಬ್ಬರಿ 775 ಭಾಷಣ ಮಾಡಿದ್ರು ಪ್ರಧಾನಿ ಮೋದಿ!

ನವದೆಹಲಿ: ಭಾಷಣ ಮಾಡೋದ್ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎತ್ತಿದ್ದ ಕೈ. ಎಲ್ಲೆ ಹೋಗಲಿ ಅಲ್ಲೊಂದು ಭಾಷಣ ಮಾಡಿ ಬರೋದು ಮೋದಿ ಅಳವಡಿಸಿಕೊಂಡಿರುವ ರೂಢಿ. ಅಂದಹಾಗೆ 2014ರ ಮೇನಲ್ಲಿ ಪ್ರಧಾನಿ ಪಟ್ಟವೇರಿದ ಬಳಿಕ ಮೋದಿ ಬರೋಬ್ಬರಿ 775 ಭಾಷಣ ಮಾಡಿದ್ದಾರೆ.

41 ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 19 ಭಾಷಣಗಳನ್ನು ಮಾಡಿದ್ದಾರೆ. ಮೋದಿಯ ಭಾಷಣ ಸರಾಸರಿ ಅವಧಿ 30 ನಿಮಿಷ. 775ರಲ್ಲಿ ಅಮೆರಿಕ ಸೇರಿದಂತೆ ವಿದೇಶಿ ನೆಲದಲ್ಲಿ 166 ಭಾಷಣಗಳನ್ನು ಮಾಡಿದ್ದಾರೆ. 2014ರಲ್ಲಿ ಮೇ 26ರಿಂದ 135 ಬಾರಿ ಭಾಷಣ, 2015ರಲ್ಲಿ 264 ಭಾಷಣ, 2016ರಲ್ಲಿ 207 ಬಾರಿ ಭಾಷಣ ಮಾಡಿದ್ದಾರೆ ಅಂತ ತಿಳಿದುಬಂದಿದೆ.

ಈ ವರ್ಷ ಇಲ್ಲಿಯವರೆಗೆ 169 ಭಾಷಣಗಳನ್ನು ನೀಡಿದ್ದಾರೆ ಪ್ರಧಾನಿ ಮೋದಿ. ಮೌನಿ ಪ್ರಧಾನಿ ಅಂತಾನೇ ಕರೆಸಿಕೊಂಡಿದ್ದ ಮನಮೋಹನ್ ಸಿಂಗ್ ಗೆ ಹೋಲಿಸಿದರೆ ಮೋದಿ ಮಾತುಗಾರ ಪ್ರಧಾನಿ. 10 ವರ್ಷಗಳವರೆಗೆ ಯುಪಿಎ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಮನಮೋಹನ್ ಸಿಂಗ್ ಒಟ್ಟು 1,401 ಬಾರಿ ಭಾಷಣ ಮಾಡಿದ್ದಾರೆ. ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ 762 ಸಲ ಮತ್ತು ಎರಡನೇ ಅವಧಿಯಲ್ಲಿ 639 ಬಾರಿ ಭಾಷಣ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

https://twitter.com/narendramodi/status/922091335728975872

Comments

Leave a Reply

Your email address will not be published. Required fields are marked *