ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸರ್ಕಾರ ಪತನವಾಗುವ ಮುನ್ಸೂಚನೆಗಳು ವ್ಯಕ್ತವಾಗುತ್ತಿವೆ. ಇಮ್ರಾನ್‌ ಖಾನ್‌ ಅವರು ನೂರಕ್ಕೆ ನೂರರಷ್ಟು ತೊಂದರೆಗೆ ಸಿಲುಕಿದ್ದಾರೆ ಎಂದು ಮಿತ್ರ ಪಕ್ಷದವರು ಹೇಳುತ್ತಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರು ಪ್ರಮುಖ ಮಿತ್ರಪಕ್ಷಗಳು ಅವರ ಸಂಪುಟದಿಂದ ಹೊರಬರಲಿರುವುದರಿಂದ ಸಂಸತ್ತಿನಲ್ಲಿ ಸರ್ಕಾರ ಬಹುಮತ ಕಳೆದುಕೊಳ್ಳುವ ಅಂಚಿನಲ್ಲಿದೆ ಎಂದು ಸರ್ಕಾರವನ್ನು ಬೆಂಬಲಿಸುವ ಪಕ್ಷದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

PAK

ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಅವಿಶ್ವಾಸ ಮತದಲ್ಲಿ ವಿರೋಧ ಗುಂಪಿಗೆ ಬೆಂಬಲವನ್ನು ಹೆಚ್ಚಿಸುತ್ತದೆ ಎಂದು ಸಂದರ್ಶನವೊಂದರಲ್ಲಿ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್-ಕ್ವೈಡ್ ಪಕ್ಷದ ಚೌಧರಿ ಪರ್ವೇಜ್ ಇಲಾಹಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮಿತ್ರ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಉಳಿಯುವಂತೆ ಮನವರಿಕೆ ಮಾಡುವ ಜವಾಬ್ದಾರಿ ಈಗ ಇಮ್ರಾನ್ ಖಾನ್ ಅವರ ಮೇಲಿದೆ. ಒಟ್ಟಾರೆ ಇಮ್ರಾನ್‌ ಖಾನ್‌ ಶೇ.100ರಷ್ಟು ತೊಂದರೆಯಲ್ಲಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

ಖಾನ್ ಅವರು ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅವಿಶ್ವಾಸ ಮತವನ್ನು ಕರೆಯುವಂತೆ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್‌ಗೆ ಕೇಳಿಕೊಂಡಿವೆ. ಮಾರ್ಚ್ 28, 30 ರ ನಡುವೆ ಶಾಸಕರು ಮತ ಚಲಾಯಿಸಬಹುದು ಎಂದು ಸರ್ಕಾರದ ಕೆಲವು ಸಚಿವರು ಹೇಳಿದ್ದಾರೆ.

ಬಲೂಚಿಸ್ತಾನ್ ಅವಾಮಿ ಪಕ್ಷ 5 ಸ್ಥಾನಗಳನ್ನು ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನದ ಏಳು ಸದಸ್ಯರು ಪ್ರತಿಪಕ್ಷವನ್ನು ಬೆಂಬಲಿಸಬೇಕೇ ಅಥವಾ ಸರ್ಕಾರದಲ್ಲಿ ಉಳಿಯಬೇಕೇ ಎಂಬುದರ ಕುರಿತು ಜಂಟಿ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸಿದ್ದಾರೆ ಎಂದು ಇಲಾಹಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *