ಭಾರತವನ್ನು ಪಾಕಿಸ್ತಾನ ಸೋಲಿಸಿದೆ: ಇಮ್ರಾನ್ ಖಾನ್

IMRANKHAN

ಇಸ್ಲಾಮಾಬಾದ್: ಪಾಕ್ ಎದುರು ಭಾರತ ಸೋತಿದೆ ಎಂದು ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಅಪಾಹಾಸ್ಯ ಮಾಡಿದ್ದಾರೆ.

ಇಮ್ರಾನ್ ಖಾನ್ ಸದ್ಯ ಅರಬ್ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ರಿಯಾದ್ ನಲ್ಲಿ ಸೌದಿ ಅರೇಬಿಯಾ-ಪಾಕಿಸ್ತಾನ ಬಂಡವಾಳ ಹೂಡಿಕೆ ವೇದಿಕೆ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕ್ರಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ! 

ನಾವು ಅಫ್ಘಾನಿಸ್ತಾನದ ಮೂಲಕ ಮಧ್ಯ ರಾಷ್ಟ್ರಗಳೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಬೇಕಿದೆ. ಇದರಿಂದ ಪಾಕಿಸ್ತಾನ ಮಾರುಕಟ್ಟೆ ವಿಸ್ತರಣೆಯಾಗಲಿದೆ. ನಮ್ಮ ನೆರೆ-ಹೊರೆಯಲ್ಲಿ ಎರಡು ಬೃಹತ್ ರಾಷ್ಟ್ರಗಳಿದ್ದು, ಅಲ್ಲಿ ದೊಡ್ಡ ಮಾರುಕಟ್ಟೆ ಇದೆ. ಇದರ ಸದುಪಯೋಗ ಪಡೆಯಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ

ಚೀನಾದೊಂದಿಗೆ ಈಗಾಗಲೇ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಿದೆ. ಆದರೆ ಹೇಗಾದರೂ ಮಾಡಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕಿದೆ. ಇದರಿಂದ ಪಾಕಿಸ್ತಾನದ ಆರ್ಥಿಕತೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲ. ಏಕೆಂದರೆ ಭಾನುವಾರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ, ಭಾರತವನ್ನು ಸೋಲಿಸಿದೆ. ಈ ಸಮಯದಲ್ಲಿ ಮಾತುಕತೆ ಹಾಗೂ ಸಂಬಂಧ ಸುಧಾರಿಸುವ ಬಗ್ಗೆ ಮಾತನಾಡುವುದು ತಪ್ಪು ಅಂತಾ ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

Comments

Leave a Reply

Your email address will not be published. Required fields are marked *