ಸಿಲಿಕಾನ್ ಸಿಟಿಯಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು- ಚೌಕಿಯಲ್ಲಿ ಏನೇನ್ ಸೌಲಭ್ಯವಿದೆ?

ಬೆಂಗಳೂರು: ಇಡೀ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ನಗರ ಎಂಬ ಖ್ಯಾತಿಗೆ ಸಿಲಿಕಾನ್ ಟಿವಿ ಬೆಂಗಳೂರು ಪಾತ್ರವಾಗಿದೆ. ಇದರ ಬೆನ್ನಲ್ಲೆ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ವಿಶೇಷ ಸೌಲಭ್ಯವಿರುವ ಪೊಲೀಸ್ ಚೌಕಿಗಳು ರೆಡಿಯಾಗಿವೆ.

ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಸದಾ ಧೂಳು, ಹೊಗೆ, ಬಿಸಿಲು ಟೆನ್ಶನ್ ನಡುವೆಯೇ ಕೆಲಸ ಮಾಡುವ ಟ್ರಾಫಿಕ್ ಪೊಲೀಸರಿಗೆ ಬಿಬಿಎಂಪಿ, ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು ನಿರ್ಮಾಣವಾಗಿವೆ. ನಗರದ್ಯಾಂತ 506 ಸುಸಜ್ಜಿತ ಪೊಲೀಸ್ ಚೌಕಿಗಳು ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ 19 ಚೌಕಿಗಳು ಈಗಾಗಲೇ ಉದ್ಘಾಟನೆಗೆ ರೆಡಿಯಾಗಿವೆ.

ಈ ಹೈಫೈ ಚೌಕಿಗಳಲ್ಲಿ ಏನೆಲ್ಲಾ ಇದಾವೆ ಎನ್ನುವುದನ್ನು ನೋಡುವುದಾದರೆ, ಗಾಳಿ ಶುದ್ಧಿಕರಣ ಯಂತ್ರ, ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಫ್ಯಾನ್‍ಗಳು, ಸಿಸಿಟಿವಿ ಕ್ಯಾಮೆರಾ, ಸ್ಪೀಕರ್ ಗಳು, ಕೂರಲು ಮೂರು ಆಸನಗಳು ಇರಲಿವೆ.

ಬಿಸಿಲು ಹೊಗೆಯಲ್ಲಿ ಇಡೀ ದಿನ ಕಳೆಯುತ್ತಿದ್ದ ಟ್ರಾಫಿಕ್ ಪೊಲೀಸರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಸದ್ಯದ ಈ ಹೊಸ ಸೌಲಭ್ಯದಿಂದ ನಮ್ಮ ಪೊಲೀಸರು ಕೊಂಚ ನಿರಾಳಗೊಂಡಿದ್ದು, ಅದಷ್ಟು ಬೇಗ ಉಳಿದ ಎಲ್ಲಾ ಹೊಸ ಚೌಕಿಗಳು ರೆಡಿಯಾಗಬೇಕಿದೆ.

Comments

Leave a Reply

Your email address will not be published. Required fields are marked *