2023ರ ಜಿಡಿಪಿ ದರ: ಚೀನಾಗೆ ಮತ್ತೆ ಶಾಕ್‌-ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಭಾರತ

ನವದೆಹಲಿ: ಹಲವು ಅಂತಾರಾಷ್ಟ್ರೀಯ ಅನಿಶ್ಚಿತೆಗಳ ಮಧ್ಯೆಯೂ 2023-24ರ ಹಣಕಾಸು ವರ್ಷದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (GDP) ಭಾರತ (India) ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ.

ಐಎಂಎಫ್‌ ಮಂಗಳವಾರ ಜಿಡಿಪಿ ಮುನ್ನೋಟವನ್ನು ಬಿಡುಗಡೆ ಮಾಡಿದೆ. 2023ರಲ್ಲಿ ಭಾರತದ ಜಿಡಿಪಿ ದರ 6.3% ಇದ್ದರೆ 2024ರಲ್ಲಿ 6.3% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದೆ. ಈ ಹಿಂದೆ 2023-24ರ ಹಣಕಾಸು ವರ್ಷದಲ್ಲಿ ಭಾರತ 6.1% ಜಿಡಿಪಿ ದಾಖಲಿಸಬಹುದು ಎಂದಿದ್ದ ಐಎಂಎಫ್‌ ಈಗ 20 ಬೇಸಿಸ್‌ ಪಾಯಿಂಟ್‌  ಏರಿಕೆ ಮಾಡಿ ವರದಿ ಬಿಡುಗಡೆ ಮಾಡಿದೆ.

ಭಾರತದ ಆರ್‌ಬಿಐ ಈ ಹಣಕಾಸು ವರ್ಷದಲ್ಲಿ 6.5% ಜಿಡಿಪಿ ದಾಖಲಿಸಬಹುದು ಎಂದು ಅಂದಾಜಿಸಿದೆ.  ಇದನ್ನೂ ಓದಿ: ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

ಇದೇ ಜಿಡಿಪಿ ಪ್ರಗತಿಯನ್ನು ಕಾಯ್ದುಕೊಂಡರೆ 2026ರಲ್ಲಿ ಜಪಾನ್‌, 2027ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಬಹುದು ಎಂದು ಐಎಂಫ್‌ ಭವಿಷ್ಯ ನುಡಿದಿದೆ.

2021ರ ಹಣಕಾಸು ವರ್ಷದ ಕೊನೆಯ ಮೂರು ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿತ್ತು.

ಚೀನಾದ ಜಿಡಿಪಿ ಬೆಳವಣಿಗೆ ದರವನ್ನು ಐಎಂಫ್‌ ಇಳಿಕೆ ಮಾಡಿದೆ. ಈ ಹಿಂದೆ 5.2% ಎಂದಿದ್ದ ಐಎಂಫ್‌ ಈಗ ದರವನ್ನು 5% ಇಳಿಸಿದೆ. ರಿಯಲ್‌ ಎಸ್ಟೇಟ್‌ ಕುಸಿತಗೊಂಡ ಹಿನ್ನೆಲೆಯಲ್ಲಿ ದರವನ್ನು ಇಳಿಕೆ ಮಾಡಿದೆ. 2024ರಲ್ಲಿ 4.2% ಜಿಡಿಪಿ ದಾಖಲಿಸಬಹುದು ಎಂದು ಹೇಳಿದೆ.

2023ರಲ್ಲಿ ಯಾವ ದೇಶದ ಜಿಡಿಪಿ ಎಷ್ಟು?
ಅಮೆರಿಕ 3%, ಜರ್ಮನಿ -0.5%, ಫ್ರಾನ್ಸ್‌ 1.0% ಜಪಾನ್‌ 2.0%, ಕೆನಡಾ 1.3% ಬ್ರೆಜಿಲ್‌ 3.1% ಜಿಡಿಪಿ ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್‌ ಅಂದಾಜಿಸಿದೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]