ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

ಬೆಂಗಳೂರು: ಐಎಂಎ ಎಂಡಿ ಮನ್ಸೂರ್ ಖಾನ್ ತನ್ನ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಶನಿವಾರ ರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಆದರೆ ಮನ್ಸೂರ್ ಈಗ ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ.

ಮನ್ಸೂರ್ ಖಾನ್ ಸಾಯ್ತೀನಿ, ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿ ದುಬೈನಲ್ಲಿ ಕುಳಿತುಕೊಂಡು ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ. ಅಲ್ಲದೆ ಬೆಂಗಳೂರಲ್ಲಿ ನಡೆಯುತ್ತಿರೋದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದಾನೆ. ಯಾರಾದರೂ ಮೆಸೆಂಜರ್ ಅಲ್ಲಿ ಮೆಸೇಜ್ ಮಾಡಿದ್ರೆ ಮನ್ಸೂಲ್ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಇದ್ದು, ವಾಟ್ಸಾಪ್ ಡೀ ಆಕ್ಟೀವ್ ಮಾಡಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಕೂಡ ಸ್ವೀಚ್ ಆಪ್ ಮಾಡಿಕೊಂಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಎಲ್ಲಿ ಇದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸರ ಪ್ರಕಾರ ಆತ ದೇಶ ಬಿಟ್ಟು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಮನ್ಸೂರ್ ಪ್ರತಿ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿ ಮತ್ತೆ ಡಿ ಆಕ್ಟೀವ್ ಮಾಡುತ್ತಿದ್ದಾನೆ. ಯಾರಾದರೂ ಮೆಸೆಂಜರ್‍ನಲ್ಲಿ ಮೆಸೇಜ್ ಮಾಡಿದ್ದರೆ, ಆ ಮೆಸೇಜ್ ಕೂಡ ಆತ ನೋಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಏನು ಚರ್ಚೆಯಾಗುತ್ತಿದೆ ಎನ್ನುವ ಕುತೂಹಲದಿಂದ ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿದ್ದಾನೆ.

ಮನ್ಸೂರ್ ವಾಯ್ಸ್ ಮೆಸೇಜ್ ಬಂದಾಗ ವಾಟ್ಸಾಪ್‍ನಲ್ಲಿ ಆಕ್ಟೀವ್ ಆಗಿದ್ದನು. ಅದಾದ ಬಳಿಕ ಆತ ತನ್ನ ವಾಟ್ಸಾಪ್ ಅನ್ನು ಡಿ ಆಕ್ಟೀವ್ ಮಾಡಿದ್ದಾನೆ. ಮನ್ಸೂರ್ ಇದುವರೆಗೂ ಮತ್ತೆ ವಾಟ್ಸಾಪ್‍ನಲ್ಲಿ ಆನ್ ಮಾಡಿಲ್ಲ. ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.

Comments

Leave a Reply

Your email address will not be published. Required fields are marked *