ಕರ್ನಾಟಕದಲ್ಲಿ ಹಿಜಬ್ ವಿವಾದ ಬೆನ್ನಲ್ಲೇ ಸ್ವರಾ ಭಾಸ್ಕರ್ ಟ್ರೋಲ್

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಸಾಕಷ್ಟು ಧ್ವನಿ ಎತ್ತುತ್ತಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಅವರ ಡ್ರೆಸ್ಸಿಂಗ್ ಶೈಲಿಗಾಗಿ ಟ್ರೋಲ್ ಆಗಿದ್ದಾರೆ.

ಟ್ವಿಟರ್ ಬಳಕೆದಾರರು ಸಂದರ್ಶನವೊಂದರಲ್ಲಿ ಸ್ವರಾ ಅವರು ಸಣ್ಣ ಉಡುಗೆ ತೊಟ್ಟ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ @Reallyswara ನನ್ನ ಸ್ನೇಹಿತರು, ಅವರು ಹಿಜಬಗಾಗಿ ಪ್ರತಿಪಾದಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

ಟ್ರೋಲ್‍ಗೆ ಪ್ರತಿಕ್ರಿಯಿಸಿದ ಅವರು, ಹೌದು ಇದು ನಾನೇ ನೋಡಲು ಬಾಂಬ್ ಆಗಿ ಕಾಣಿಸುತ್ತಿದೆ ಧನ್ಯವಾದಗಳು! ನನ್ನ ಈ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ. ನಾನು ಕೂಡ ಹಾಟ್ ಎಂದು ಜಗತ್ತಿಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು! ನಾನು ಮಹಿಳೆಯರ ಹಕ್ಕನ್ನು ಪ್ರತಿಪಾದಿಸುತ್ತೇನೆ. ನನ್ನ ಉಡುಪನ್ನು ಆಯ್ಕೆ ಮಾಡಲು ನಿಮಗೆ ಗೊತ್ತಾ, ಯಾರಾದರೂ ಇದ್ದೀರಾ ಆದರೂ ಪರವಾಗಿಲ್ಲ ಇರಲಿ ಬಿಡಿ. ನೀವು ಹೋಗಿ ಬೇರೆಯವರನ್ನು ನಾಚಿಕೆಪಡಿಸಿ. ನನ್ನನ್ನು ನಾಚಿಸಲು ನೀವು ವಿಫಲರಾಗಿದ್ದೀರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.   ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ವಿದ್ಯಾರ್ಥಿಗಳನ್ನು ವಿಭಜಿಸಿ ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾದ ಹಿಜಬ್ ವಿವಾದದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 17 ರಿಂದ ಪ್ರಾರಂಭಿಸಿದೆ. ಇದು ಸತತ ಐದನೇ ದಿನದ ಕಲಾಪವನ್ನು ಸೂಚಿಸುತ್ತಿದೆ.

ಕಳೆದ ವರ್ಷ 2021ರ ಸೊಹೊ ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಶೀರ್ ಖೋರ್ಮಾದಲ್ಲಿ ಸಿತಾರಾ ಪಾತ್ರಕ್ಕಾಗಿ ಸ್ವರಾ ಅವರು ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. ನಟಿ ತನು ವೆಡ್ಸ್ ಮನು, ನಿಲ್ ಬತ್ತೆ ಸನ್ನತ, ರಾಂಜನಾ ಮತ್ತು ವೀರೆ ದಿ ವೆಡ್ಡಿಂಗ್‍ನಂತಹ ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *