ವಿಡಿಯೋ: ಗೋವುಗಳ ಅಕ್ರಮ ಸಾಗಾಟ- ಹಿಂದೂಪರ ಸಂಘಟನೆಯಿಂದ ವ್ಯಾನ್‍ಗೆ ಬೆಂಕಿ

ಕೊಡಗು: ಜಾನುವಾರುಗಳ ಕಳ್ಳ ಸಾಗಾಟಗಾರರ ವಿರುದ್ಧ ಅಕ್ರೋಶಗೊಂಡ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ತೋರೆನೂರು ಗ್ರಾಮದ ಬಳಿಯಿಂದ ಟೆಂಪೋ ಟ್ರಾವೆಲರ್‍ನಲ್ಲಿ ದನಗಳನ್ನು ಅಕ್ರಮವಾಗಿ ಮಂಗಳೂರಿಗೆ ಸಾಗಾಟ ಮಾಡಲಾಗ್ತಿತ್ತು. ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಟಿಟಿ ವಾಹನ ಚೇಸ್ ಮಾಡುವ ಸಂದರ್ಭದಲ್ಲಿ ಹಿಂಬಾಲಿಸುತ್ತಿದ್ದ ಪೊಲೀಸರ ಬೈಕ್‍ಗೆ ಟಿಟಿ ವಾಹನದ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಸುಮಾರು 20 ಕಿಲೋಮೀಟರ್ ವಾಹನ ಹಿಂಬಾಲಿಸಿದ ಪೊಲೀಸರು ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಗು ಸಾರ್ವಜನಿಕರು ಟೆಂಪೋಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಮಂಗಳೂರು ಮೂಲದವರು ಎನ್ನಲಾದ ಷರೀಫ್ ಹಾಗು ಮನ್ಸೂರ್ ಎಂಬವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/WEt4Ww6cXLA

 

Comments

Leave a Reply

Your email address will not be published. Required fields are marked *