ತಡರಾತ್ರಿವರೆಗೂ ಕಾದು ಕುಳಿತು ಅಕ್ರಮ ಮರಳು ವಾಹನಗಳನ್ನ ಪೊಲೀಸರಿಗೆ ಒಪ್ಪಿಸಿದ ಶಾಸಕ

ವಿಜಯಪುರ: ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು, ಆದರೆ ಇದನ್ನು ನೋಡಿದ ಶಾಸಕ ದೇವಾನಂದ ಚವ್ಹಾಣ ಖದ್ದು ಅಕ್ರಮ ಮರಳು ವಾಹನಗಳನ್ನ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಕ್ರಮ ಮರಳು ಮಾಫಿಯಾ ನೋಡಿಯು ನೋಡದಂತೆ ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ ಇಲಾಖೆ ನಿದ್ರೆಗೆ ಜಾರಿತ್ತು. ಆದ್ದರಿಂದ ಈಗ ಫೀಲ್ಡ್ ಗೆ ಖುದ್ದು ವಿಜಯಪುರದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಇಳಿದಿದ್ದಾರೆ. ಸೋಮವಾರ ತಡರಾತ್ರಿ ನಾಗಠಾಣ ಮತಕ್ಷೇತ್ರದಲ್ಲಿ ಅಕ್ರಮ ಮರಳು ತುಂಬಿಕೊಂಡು ವಾಹನಗಳು ಹೋಗುತ್ತಿದ್ದವು. ಬಳಿಕ ತಡರಾತ್ರಿವರೆಗೂ ಕಾದು ಕುಳಿತು ವಾಹನಗಳನ್ನ ತಡೆದು ಶಾಸಕ ದೇವಾನಂದ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ವಾಹನದ ಚಾಲಕ ಪರಾರಿಯಾಗಿದ್ದು, ಸದ್ಯ ವಿಜಯಪುರ ಗ್ರಾಮೀಣ ಪೊಲೀಸರು ಮರಳು ವಾಹನ ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ಮಾಫಿಯಾಗೆ ಬ್ರೇಕ್ ಹಾಕಲು ಖುದ್ದು ಶಾಸಕ ದೇವಾನಂದ ರಸ್ತೆಗಿಳಿದಿದ್ದು, ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *