ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯ -ಕೊಲೆಯಲ್ಲಿ ಅಂತ್ಯ

ಹಾವೇರಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ದುಮ್ಯಾಳ ಗ್ರಾಮದ ಬಳಿ ನಡೆದಿದೆ.

ಮೃತಳನ್ನ 35 ವಯಸ್ಸಿನ ರಾಧಾ ಕಾಂಡೇಕರ್ ಎಂದು ಗುರುತಿಸಲಾಗಿದೆ. ಮೃತಳ ಪತಿ ಹಾಲು ಮಾರಾಟ ಮಾಡಲು ಹೋಗಿದ್ದ ವೇಳೆ ಅರುಣ ಎಂಬಾತ ರಾಧಾಳನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮೃತ ರಾಧಾ ಮತ್ತು ಆರೋಪಿ ಅರುಣ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದರು. ಆರೋಪಿ ಅರುಣ ಪದೇ ಪದೇ ಮೃತ ರಾಧಾಳನ್ನ ದೈಹಿಕ ಸಂಬಂಧಕ್ಕೆ ಕರೆಯುತ್ತಿದ್ದ ಎಂದು ತಿಳಿದು ಬಂದಿದೆ. ಅದೇ ರೀತಿ ಗುರುವಾರ ರಾತ್ರಿ ರಾಧಾಳನ್ನ ಆರೋಪಿ ಅರುಣ ದೈಹಿಕ ಸಂಪರ್ಕಕ್ಕೆ ಕರೆದಿದ್ದಾನೆ. ಆದರೆ ಇದಕ್ಕೆ ಮೃತ ರಾಧಾ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಆಕೆಯ ಮನೆಯ ಸಮೀಪದಲ್ಲೇ ಕತ್ತು ಹಿಸುಗಿ ಹತ್ಯೆಗೈದು ಪರಾರಿಯಾಗಿದ್ದಾನೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎಸ್‍ಪಿ ಕೆ.ಪರಶುರಾಮ ಮತ್ತು ಕಾಗಿನೆಲೆ ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *