24 ಗಂಟೆನೂ ಬಾರ್ ಓಪನ್- ರಾಜಾರೋಷವಾಗಿ ನಡೀತಿದೆ ಅಕ್ರಮ ಎಣ್ಣೆ ದಂಧೆ

ಗದಗ: ಇಲ್ಲಿ ಎಣ್ಣೆ ಅಂಗಡಿಗಳದ್ದೇ ಕಾರುಬಾರು. ನಗರದಲ್ಲಿ ಸುಮಾರು 50ಕ್ಕೂ ಅಧಿಕ ಬಾರ್ & ರೆಸ್ಟೊರೆಂಟ್‍ಗಳಿದ್ದು, ಎಲ್ಲವೂ ಅಕ್ರಮ ಎನ್ನಲಾಗಿದೆ. ಈ ಅಕ್ರಮವನ್ನು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿ ಬಟಾ ಬಯಲು ಮಾಡಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಅಕ್ರಮ ಮದ್ಯ ದಂಧೆ ನಡಿಯುತ್ತಿದೆ. ಆದ್ರೆ ಈ ಬಗ್ಗೆ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ತಿಲ್ಲ. ಹೌದು, ಅಲ್ಲಿ ಎಣ್ಣೆ ಪ್ರಿಯರಿಗೆ ನಿತ್ಯವೂ ಎಣ್ಣೆ ಸ್ನಾನ. ಸರ್ಕಾರ ಬಾರ್‍ಗಳನ್ನು ಬಂದ್ ಮಾಡಿದರೂ ಇಲ್ಲಿ ಮಾತ್ರ ಬಂದ್ ಆಗೋದಿಲ್ಲ. ಇದನ್ನೇ ನೆಪವಿಟ್ಟುಕೊಂಡ ಇಲ್ಲಿನ ಬಾರ್‍ಗಳೂ ಕುಡುಕರನ್ನು ದರೋಡೆ ಮಾಡುತ್ತಿವೆ. ಇದೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಗಪ್-ಚುಪ್ ಆಗಿದ್ದಾರೆ.

ಅವಳಿ ನಗರದಲ್ಲಿರುವ ಬಾರ್ ಒಂದರ ಸಪ್ಲೈಯರ್ ಜೊತೆ ಮಾತನಾಡಿದಾಗ ಆತ ಅಕ್ರಮಗಳ ಬಗ್ಗೆ ಬಿಚ್ಚಿಟ್ಟಿದ್ದಾನೆ. ಎಲ್ಲಾ ಕಡೆ ಬಾರ್ ಬಂದ್ ಅಂತೆ, ನಿಮ್ಮ ಕಡೆ ಬಿಯರ್ ಸಿಗುತ್ತಾ? ಎಂದು ಕೇಳಿದಕ್ಕೆ ಸಿಗುತ್ತೆ ಸಾರ್ ಬನ್ನಿ ಎಂದು ಹೇಳಿದನು. ಬಳಿಕ ಒಂದು ಎರಡು ಬಿಯರ್ ಕೊಡೋದಿಲ್ಲ. ನಾಲ್ಕೈದರಿಂದ 10 ತಗೊಬೇಕು ಆಗ ಕೊಡ್ತೀವಿ. ಇಲ್ಲಾ ಅಂದ್ರೆ ಕೊಡಲ್ಲ. ಒಂದು ಬಾಟಲ್ ಎಲ್ಲ ಕೊಡೋಕೆ ಅಗಲ್ಲ. ತುಂಬಾನೆ ರಿಸ್ಕ್ ಇದೆ. ಸಿಕ್ಕಿ ಬಿದ್ರೆ ಒಂದು ಲಕ್ಷ ಫೈನ್ ಹಾಕ್ತಾರೆ. ಲೈಸನ್ಸ್ ಕ್ಯಾನ್ಸಲ್ ಮಾಡ್ತಾರೆ. ಆಮೇಲೆ ಯಾರಾದರೂ ಪಿನ್ ಮಾಡಿದರೆ ಸಾಕು ಅಷ್ಟೇ ಗತಿ. ಪೊಲೀಸರು ಬೇರೆ ಇಲ್ಲೆ ಮೇಲೆ ಇದ್ದಾರೆ. ಹಾಗೋ ಹೀಗೋ ಕಷ್ಟಪಟ್ಟು ಕೊಡ್ತೀವಿ. ಆದ್ರೆ ನಿಮ್ಮ ಸ್ನೇಹಿತರಿಗೆ ಯಾರಿಗಾದರೂ ಬೇಕಾ ಕೇಳಿ ಅವರಿಗೂ ತಗೊಂಡು ಹೋಗಿ. ಐದು ಬಿಯರ್ ತಗೊಂಡರೆ ಕೊಡ್ತೀವಿ ಎಂದು ಸಪ್ಲೈಯರ್ ಹೇಳಿದ್ದಾನೆ.

ಬಳಿಕ ಬಿಯರ್ ಬೆಲೆ ಹಾಗೂ ಅಧಿಕಾರಿಗಳಿಗೆ ಮಾಮೂಲಿ ಕೊಡ್ತೀರ ಎಂದು ಪ್ರಶ್ನಿಸಿದಕ್ಕೆ, ಪ್ರತಿದಿನ 120 ರಿಂದ 130 ರೂಪಾಯಿ ಇರುತ್ತೆ. ಇವತ್ತು ಬಂದ್ ಮಾಡಿದರಲ್ವಾ ಅದಕ್ಕೆ 200 ರಿಂದ 250 ರೂಪಾಯಿಗೆ ಕೊಡ್ತೀವಿ. ಅಬಕಾರಿನವರಿಗೂ ಮಾಮೂಲಿ ಕೊಡುತ್ತೇವೆ. ಸಿವಿಲ್‍ನವರಿಗೂ ಮಾಮೂಲಿ ಕೊಡಬೇಕು. ಆದ್ರ ಸಿವಿಲ್‍ನವರಿಗೆ ಬಹಳ ಹಕ್ಕಿಲ್ಲ, ಆದ್ರೂ ಅವರು ನಮಗೂ ಏನಾದ್ರೂ ಸಿಗುತ್ತೊ ಏನು ಅಂತ ಅಧಿಕಾರ ಚಲಾಯಿಸುತ್ತಾರೆ ಅಂತ ಸಪ್ಲೈಯರ್ ವಿಷಯ ತಿಳಿಸಿದ್ದಾನೆ.

ಇಷ್ಟೆಲ್ಲಾ ಅಕ್ರಮಗಳು ನಡಿಯುತ್ತಿರೋದು ಗೊತ್ತಿದ್ದರೂ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಇನ್ನಾದರು ಹಿರಿಯ ಅಧಿಕಾರಿಗಳೇ ಕ್ರಮ ತೆಗೆದುಕೊಂಡು ಈ ಅಕ್ರಮಕ್ಕೆ ತಡೆ ಹಾಕಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *