ಫಿಲ್ಮ್ ಚೇಂಬರ್ ನಲ್ಲಿ ಅಕ್ರಮ : ಬಾಂಬ್ ಸಿಡಿಸಿದ ರಾಜೇಂದ್ರ ಸಿಂಗ್ ಬಾಬು

ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಈ ಬಾಂಬ್ ಸದ್ಯ ಸಿನಿಮಾ ರಂಗದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೇ, ವಾಣಿಜ್ಯ ಮಂಡಳಿಯಲ್ಲೂ ಹೀಗೂ ಆಗಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

ಐದಾರು ತಿಂಗಳು ಹಿಂದೆಯಷ್ಟೇ ರಾಜೇಂದ್ರ ಸಿಂಗ್ ಬಾಬು ಮತ್ತು ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕರು ಮತ್ತು ನಿರ್ದೇಶಕರು ಫಿಲ್ಮ್ ಚೇಂಬರ್ ಗೆ ಹೋಗಿದ್ದರಂತೆ. ಅಷ್ಟೂ ಜನರು ಫಿಲ್ಮ್ ಚೇಂಬರ್ ನಲ್ಲಿ ಆದ ಅಕ್ರಮದ ಕುರಿತು ದೂರು ನೀಡಿದರಂತೆ. ಆದರೆ, ಹಾಲಿ ಇರುವ ಕಮೀಟಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ಅವರು, ‘ನಾವೆಲ್ಲ ವಾಣಿಜ್ಯ ಮಂಡಳಿಗೆ ಹೋಗಿ ಕಾಫಿ ಮಿಷನ್ ಗಾಗಿ 26 ಸಾವಿರ ಖರ್ಚು ಮಾಡಿದ್ದೀರಿ. ಬಾತ್ ರೂಮ್ ಕಟ್ಟಲು 26 ಲಕ್ಷ, ಇನ್ನಾವುದೋ ಕಾರಣಕ್ಕಾಗಿ 40 ಲಕ್ಷ ಖರ್ಚು ಮಾಡಲಾಗಿದೆ. ಅಲ್ಲದೇ, ನಾನಾ ರೀತಿಯಲ್ಲಿ ಹಣ ದುರ್ಬಳಕೆ ಆಗಿದೆ. ಇದಕ್ಕೆ ಉತ್ತರ ಕೊಡಿ ಎಂದು ಕೇಳಿದೆವು. ಯಾರಿಂದಲೂ ಉತ್ತರ ಬರಲಿಲ್ಲ’ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

ಇದೇ ಸಂದರ್ಭದಲ್ಲಿ ಏಳು ವಾರ ಬಿಟ್ಟು ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಲಿ ಅಂತ ಡಾ.ರಾಜ್ ಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದೆವು. ವಿಧಾನ ಸಭೆಯ ಮುತ್ತಿಗೆ ಹಾಕಿದೆವು. ಇದೇ ಫಿಲ್ಮ್ ಚೇಂಬರ್ ನವರು ಆಗ ನಮ್ಮ ಹೋರಾಟದ ವಿರುದ್ಧ ಕೋರ್ಟಿಗೆ ಹೋಗಲು ಸಿದ್ಧರಾಗಿದ್ದರು. ಫಿಲ್ಮ್ ಚೇಂಬರ್ ಕನ್ನಡ ಪರವಾಗಿ ಕೆಲಸ ಮಾಡಬೇಕು ಎಂದು ಚುನಾವಣಾ ಸಂದರ್ಭದಲ್ಲಿ ಹಲವು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *