– ಬಚಾವಾಗಲು ಶವ ಬಿಸಾಡಿದ ಕೇರಳದ ದಂಪತಿ!
ಚಾಮರಾಜನಗರ: ಜಮೀನಿನ ಬೆಳೆ ರಕ್ಷಣೆಗೆ ಹಾಯಿಸಿದ್ದ ಅಕ್ರಮ ವಿದ್ಯುತ್‍ಗೆ ನೀರು ಕುಡಿಯಲು ಬಂದ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಪ್ಪ(57) ಮೃತ ದುರ್ದೈವಿ. ಕೇರಳದ ವೈನಾಡಿನ ಅಬ್ದುಲ್ ಸುಕುರ್ ಎನ್ನುವವರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದು. ಜಮೀನಿನ ಬೆಳೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿದ್ದರು. ಈ ವೇಳೆ ದನ ಮೇಯಿಸುತ್ತಿದ್ದ ಶಿವಪ್ಪ ನೀರು ಕುಡಿಯಲು ಅಬ್ದುಲ್ ಸುಕುರ್ ಜಮೀನಿಗೆ ತೆರಳಿದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ
ಶಿವಪ್ಪ ಮೃತಪಟ್ಟಿರುವುದನ್ನು ಗಮನಿಸಿದ ಸುಕುರ್ ದಂಪತಿ ಅವರ ಶವವನ್ನು ಜಮೀನಿನಿಂದ 30 ಅಡಿ ದೂರದ ಬೇಲಿ ಬಳಿ ಬಿಸಾಡಿ ತಮಗೇನು ಗೊತ್ತಿಲ್ಲದಂತೆ ಸುಮ್ಮನಾಗಿದ್ದಾರೆಂದು ಮೃತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್
ಈ ಹಿನ್ನೆಲೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಸುಕರ್ ದಂಪತಿ ವಿರುದ್ಧ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Leave a Reply