ಮಧ್ಯಪ್ರದೇಶ ಕಾರ್ಮಿಕರ ಅಕ್ರಮ ಬಂಧನ – ರಕ್ಷಣೆಗಾಗಿ ಎಂಪಿ ಡಿಸಿಗೆ ಕರೆ

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕು ಗುಬ್ಬೇವಾಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮಧ್ಯಪ್ರದೇಶದ ಕಾರ್ಮಿಕರನ್ನು ಅಕ್ರಮ ಬಂಧನದಲ್ಲಿಡಲಾಗಿದ್ದು, ರಕ್ಷಣೆಗಾಗಿ ಕಾರ್ಮಿಕರು ಮಧ್ಯಪ್ರದೇಶ ಡಿಸಿಗೆ ಕರೆ ಮಾಡಿದ್ದಾರೆ.

ಕಾರ್ಮಿಕರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದ ಗುಬ್ಬೇವಾಡ ಗ್ರಾಮದ ಜಮೀನು ಮಾಲಿಕ ಬಿರಾದಾರ್ ಹಾಗೂ ಮಧ್ಯಪ್ರದೇಶದ ರೋಹಿತ್ ಎನ್ನುವ ವ್ಯಕ್ತಿ. ಕಾರ್ಮಿಕರು ರಕ್ಷಣೆಗಾಗಿ ಮಧ್ಯಪ್ರದೇಶ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದರು. ಈ ಹಿನ್ನೆಲೆ ರಾತ್ರೋರಾತ್ರಿ ಇಂಡಿ ಪೊಲೀಸರಿಂದ ಅಕ್ರಮ ಬಂಧನದಲ್ಲಿದ್ದ ಮಧ್ಯಪ್ರದೇಶದ 10 ಮಕ್ಕಳು ಸೇರಿ 35 ಕಾರ್ಮಿಕರಿಗೆ ಬಂಧನದಿಂದ ಮುಕ್ತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಕನ ಕಣ್ಣಿಗೆ ಮೊಳೆ ಹೊಡೆದು ವಿಚಿತ್ರವಾಗಿ ಸಾಯಿಸಿದ ಕ್ರೂರಿಗಳು!

ತಡರಾತ್ರಿ ಜಮೀನಿಗೆ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಜಮೀನು ಮಾಲಿಕ ಬಿರಾದಾರ್ ಕಾರ್ಮಿಕರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಕಬ್ಬು ಕಟಾವು ಮಾಡಿಸಿಕೊಳ್ಳುತ್ತಿದ್ದನು. ರೋಹಿತ್ ಎಂಬ ವಕ್ತಿಯು ಕಾರ್ಮಿಕರನ್ನು ಮಧ್ಯಪ್ರದೇಶದಿಂದ ಕರೆತಂದಿದ್ದನು. ಈ ವೇಳೆ ಕಾರ್ಮಿಕರು 100 ಟನ್ ಕಬ್ಬು ಕಟಾವು ಮಾಡಿದ್ದರು, ಸಹಿತ ಇನ್ನೂ 400 ಟನ್ ಕಬ್ಬು ಕಟಾವಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

ಕಾರ್ಮಿಕರು ಹೀಗಾಗಿ ಮಧ್ಯಪ್ರದೇಶದ ಜಿಲ್ಲಾಧಿಕಾರಿಗೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು. ಬಳಿಕ ಮಧ್ಯಪ್ರದೇಶ ಡಿಸಿ ಈ ಬಗ್ಗೆ ವಿಜಯಪುರ ಎಸ್ಪಿ ಆನಂದ ಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಸ್ಪಿ ಆನಂದ ಕುಮಾರ್ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿಗೆ ಕಾರ್ಮಿಕರ ರಕ್ಷಣೆಗೆ ಆದೇಶಿಸಿದ್ದಾರೆ. ಈ ವೇಳೆ ಡಿವೈಎಸ್ಪಿ ರಾತ್ರೋರಾತ್ರಿ ಕಾರ್ಯಾಚರಣೆ ಮಾಡಿ 35 ಕಾರ್ಮಿಕರು, 10 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಅವರನ್ನು ಅಕ್ರಮ ಬಂಧನದಿಂದ ರಕ್ಷಿಸುವುದಲ್ಲದೆ ರಾತ್ರಿಯೇ ಸೊಲ್ಲಾಪುರ ರೈಲು ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಕಾರ್ಮಿಕರನ್ನು ಅಲ್ಲಿಂದ ರೈಲು ಮೂಲಕ ಮಧ್ಯಪ್ರದೇಶಕ್ಕೆ ರವಾನೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *