ಅಕ್ರಮ ಕಟ್ಟಡ ನಿರ್ಮಾಣ ಸರ್ಕಾರದ ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

ಬೆಂಗಳೂರು/ಆನೇಕಲ್: ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ಸೋಂಪುರ ಗ್ರಾಮದ ಸರ್ವೆ ನಂಬರ್ 30/1, 31/1 ಮತ್ತು ಚಿಕ್ಕ ದುನ್ನಸಂದ್ರ ಗ್ರಾಮದ ಮೊದಲ ಸರ್ವೆ ನಂಬರ್ 7/2ರಲ್ಲಿ ಒಟ್ಟು 4 ಎಕರೆ 37 ಗುಂಟೆ ಜಮೀನಿನಲ್ಲಿ ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಮೇ ಡ್ರೀಮ್ಸ್ ಇನ್ ಫ್ರಾ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿಯು ಒತ್ತುವರಿ ಮಾಡಿಕೊಂಡಿದ್ದನ್ನು ಸರ್ಕಾರ ತೆರವು ಮಾಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನೂ ಓದಿ:ಬೈಕ್, ಡಬಲ್ ಬ್ಯಾರಲ್ ಕೋವಿ ಕದ್ದಿದ್ದ ಆರೋಪಿ ಅಂದರ್

ಸರ್ಕಾರದ ಈ ಕ್ರಮವನ್ನು ದಿಕ್ಕರಿಸಿ ಮತ್ತೊಂದು ಸ್ಥಳೀಯ ಮಾಡ್ರನ್ ಸ್ಪೇಸ್ ಕಂಪನಿ (ಯತೀಶ್ ಮತ್ತು ಕಾಡ ಅಗ್ರಹಾರ ಮಂಜುನಾಥ್) ಕಾಮಗಾರಿ ಮುಂದುವರೆಸಿತ್ತು. ಇದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಮುರಳಿ ಸರ್ಕಾರಕ್ಕೆ ಮಾಹಿತಿ ಕೋರಿ ವಿವರ ಕೇಳಿದ್ದರು. ಇದನ್ನು ಮನಗಂಡ ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಿಲ್ಲಿಸಿ ಸರ್ಕಾರದ ಸ್ವತ್ತು ಎಂದು ಎಚ್ಚರಿಕಾ ಫಲಕ ನೆಟ್ಟು ಆಸ್ತಿಯನ್ನು ಮತ್ತೊಮ್ಮೆ ವಶಪಡಿಸಿಕೊಂಡಿತ್ತು. ಇದರಿಂದ ಕೆರಳಿದ ಮಾಡ್ರನ್ ಸ್ಪೇಸ್ ಕಂಪನಿ ಇದೆಲ್ಲದ್ದಕ್ಕೂ ಕಾರಣ ಮುರಳಿಯ ಅರ್ಜಿಯೇ ಎಂದು ಖಾತರಿ ಪಡಿಸಿಕೊಂಡು ಕಂಪೆನಿಯ ಕೇಶವ, ಬಿಕ್ಕನಹಳ್ಳಿಯ ನವೀನ್, ಜಗದೀಶ್ ತಂಡ ಮುರಳಿ ಕಾರನ್ನು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ:ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

ಇದೆಲ್ಲದರ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಂತರ ಗಾಯಾಳು ಆಕ್ರಮಿತರಿಂದ ತಪ್ಪಿಸಿಕೊಳ್ಳಲು ಬೇಕರಿಯಲ್ಲಿ ಆಶ್ರಯ ಪಡೆದಾಗಲೂ ಹಲ್ಲೆ ಮುಂದುವರಿದಾಗ, ಅಲ್ಲಿಯೇ ಇದ್ದ ಬಾಟಲಿಯಿಂದ ಎದುರಾಳಿಗಳಿಂದ ರಕ್ಷಿಸಿಕೊಂಡಿದ್ದಾರೆ. ಆ ನಂತರ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮುರಳಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಇದರಿಂದ ಎರೆಡೂ ಕಡೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *