63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ

ಮುಂಬೈ: 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ರೇಖಾ. ಇಂದಿಗೂ ತಮ್ಮ ಮೋಹಕ ನಗೆ, ಫಿಟ್‍ನೆಸ್ ಮೂಲಕ ಸದ್ಯದ ಯುವ ನಟಿಯರಿಗೂ ಚಾಲೆಂಜ್ ಹಾಕುವಂತಹ ಸೌಂದರ್ಯವನ್ನು ಹಿರಿಯ ನಟಿ ರೇಖಾ ಹೊಂದಿದ್ದಾರೆ. ಭಾನುವಾರ ನಡೆದ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಹೆಜ್ಜೆ ಹಾಕುವ ಮೂಲಕ ನೋಡುಗರು ಮೂಗಿನ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

ವಯಸ್ಸು 63 ಆದ್ರೂ, 23ರ ಯುವತಿಯೂ ನಾಚುವಂತೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ರೆ ನೋಡುವವರ ಹೃದಯ ಝಲ್ ಅನ್ನುವಂತಿತ್ತು ಎಂದು ಹಲವು ಬಾಲಿವುಡ್ ತಾರೆಯರು ಹೇಳಿಕೊಂಡಿದ್ದಾರೆ. ತಮ್ಮ ನಟನೆಯ ಎವರ್ ಗ್ರೀನ್ ಹಾಡುಗಳಾದ ‘ಸಲಾಮೇ ಇಶ್ಕ್ ಮೇರಿ ಜಾನ್’, ‘ದಿಲ್ ಚೀಜ್ ಕ್ಯಾ ಹೈ’ ಮತ್ತು ‘ಆಕೋಂ ಕೀ ಮಸ್ತಿ’ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋವನ್ನು ಐಫಾ ತನ್ನ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ಇದನ್ನೂ ಓದಿ: IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಬರೋಬ್ಬರಿ 20 ವರ್ಷಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ರೇಖಾ ಹೆಜ್ಜೆ ಹಾಕಿದ್ದಾರೆ. ನೃತ್ಯದಲ್ಲಿ ತಮ್ಮ ಕಣ್ಸನ್ನೆಯ ಮೂಲಕವೇ ಅಭಿಮಾನಿಗಳನ್ನು ರಂಜಿಸಿದ್ದಾರೆ. ರೇಖಾ ಡ್ಯಾನ್ಸ್ ಮುಗಿಯುತ್ತಿದ್ದಂತೆ ವೇದಿಕೆಯ ಮೇಲೆ ಬಂದ ವರುಣ್ ಧವನ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಜೊತೆಯಾಗಿ ಎಲ್ಲರೂ ಒಟ್ಟಾಗಿ ಕುಣಿದು ಕುಪ್ಪಳಿಸಿದ್ದಾರೆ.

1966ರಲ್ಲಿ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ರೇಖಾ ತೆಲುಗಿನ ರಂಗಲು ರತ್ನಂ ಚಿತ್ರದಲ್ಲಿ ನಟಿಸಿದ್ರು. ಮುಂದೆ 1969ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ ‘ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿಐಡಿ 999’ ಸಿನಿಮಾದಲ್ಲಿಯೂ ನಟಿಸಿದ ನಂತರ ಹಿಂದಿ ಸಿನಿಮಾಗಳತ್ತ ಮುಖ ಮಾಡಿದ್ರು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರೇಖಾ ಚಿತ್ರರಂಗದಲ್ಲಿ ತಮ್ಮದೇ ಆದ ಟ್ರೆಂಡ್ ಕ್ರಿಯೇಟ್ ಸೃಷ್ಟಿ ಮಾಡುವ ಮೂಲಕ ಇಂದಿಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

https://twitter.com/TheRekhaFanclub/status/1010983479566364673

https://twitter.com/ShraddhaxDaily/status/1011088387976060928

Comments

Leave a Reply

Your email address will not be published. Required fields are marked *