ಶಿರೂರು ಶ್ರೀ ನಿಗೂಢ ಸಾವು- ಮಠಕ್ಕೆ ಐಜಿಪಿ ಅರುಣ್ ಚಕ್ರವರ್ತಿ ಭೇಟಿ

ಉಡುಪಿ: ಶಿರೂರು ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಎಸ್ಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಸಭೆ ನಡೆಸಿದ್ದಾರೆ.

ದಿನಪೂರ್ತಿ ಉಡುಪಿಯಲ್ಲಿದ್ದ ಐಜಿಪಿ ತನಿಖೆಯ ಪ್ರಗತಿ ಪರಿಶೀಲಿಸಿದ್ದಾರೆ. ಸ್ವಾಮೀಜಿ ನಿಗೂಢ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮೂಲ ಮಠಕ್ಕೆ ಮತ್ತು ಉಡುಪಿ ಮಠಕ್ಕೆ ಭೇಟಿ ನೀಡುತ್ತೇನೆ. ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಈ ಪ್ರಕರಣದಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲಿಸಿದ್ದೇನೆ ಎಂದು ಐಜಿಪಿ ಹೇಳಿದರು.

ತನಿಖಾಧಿಕಾರಿ ಬೆಳ್ಳಿಯಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಜೊತೆ ಚರ್ಚೆ ಮಾಡಿದ್ದೇನೆ. ತನಿಖೆಗೆ ಐದು ತಂಡಗಳ ರಚನೆಯಾಗಿದೆ. ಎಲ್ಲಾ ತಂಡಗಳು ವಿವಿಧ ಆಯಾಮದಲ್ಲಿ ಕೆಲಸ ಮಾಡುತ್ತಿದೆ ಎಂದರು.

ಸಭೆಯ ನಂತರ ಶಿರೂರು ಮೂಲ ಮಠಕ್ಕೆ ಐಜಿಪಿ ಭೇಟಿ ನೀಡಿದ್ದರು. ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ. ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಜೊತೆ ಮೂಲಮಠಕ್ಕೆ ಭೇಟಿಕೊಟ್ಟ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಐಜಿ ಶಿರೂರು ಶ್ರೀಗಳ ಬೃಂದಾವನವನ್ನು ವೀಕ್ಷಿಸಿದರು.

ಮೂಲ ಮಠದಲ್ಲಿ ನಡೆಯುವ ತನಿಖೆ ಕುರಿತು ಎಸ್ಪಿ ಮೂಲಕ ಮಾಹಿತಿ ಪಡೆದ ಐಜಿ, ಸ್ವಾಮೀಜಿ ಆಸ್ಪತ್ರೆಗೆ ತೆರಳಿದ ದಿನ ಯಾರೆಲ್ಲ ಇದ್ದರು, ಅವರ ಹೇಳಿಕೆಗಳೇನು ಅಂತ ಮಾಹಿತಿ ಕಲೆ ಹಾಕಿದ್ದಾರೆ. ಶಿರೂರು ನಗರದ ಮಠಕ್ಕೆ ಬಂದು ಅಲ್ಲೂ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *